ಚೇರಂಬಾಣೆ ಪಾಕ ದೇವಾಲಯದ ದೇವರ ಮೀನು ಬೇಟಿ- ಹುಂಡಿ ಕಳ್ಳತನ: ಇಬ್ಬರ ಬಂಧನ

ಕೊಡಗಿನ ಇತಿಹಾಸ ಪ್ರಸಿದ್ದ ,ಶ್ರದ್ದಾಭಕ್ತಿಯ ಕೇಂದ್ರ ಸ್ಥಾನ ಮಡಿಕೇರಿ ತಾಲ್ಲೂಕಿನ ಕೊಳಗದಾಳು ಪಾಕ ಶ್ರೀ ದುರ್ಗಪರಮೇಶ್ವರಿ ದೇವಾಲಯದ ಹುಂಡಿ ಕಳವು ಮಾಡಿ, ನದಿಯ ದೇವರ ಗುಂಡಿಯಲ್ಲಿ ಮೀನನ್ನು ಬೇಟೆ ಮಾಡಿದ ಪ್ರಕರಣ ನಡೆದಿದ್ದು,ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಗ್ರಾಮದಲ್ಲಿ ಸಾವು ಸಂಭವಿಸಿದ್ದ ಹಿನ್ನಲೆಯಲ್ಲಿ,ಎಂದಿನಂತೆ ಮೃತರ ಕಾರ್ಯದ ನಂತರ ಪೂಜೆ ನಡೆಸಲು ಅರ್ಚಕ ಶ್ರೀನಿವಾಸ ಮೂರ್ತಿ ಮಧ್ಯಾಹ್ನ ದ ನಂತರ ದೇವಾಲಯಕ್ಕೆ ಆಗಮಿಸಿದ್ದು, ನದಿಯ ಮೀನಿಗೆ ಆಹಾರ ಹಾಕಲು ತೆರಳುವ ಸಂದರ್ಭ ಮೀನು ಬೇಟೆಯಲ್ಲಿ ತೊಡಗಿದ್ದ ಇಬ್ಬರು ಓಡಿಹೋಗಿದ್ದು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಬಳಿಕ ಗ್ರಾಮಸ್ಥರು ಬೆನ್ನಟ್ಟಿ ಮಡಿಕೇರಿಯ ರಾಜರಾಜೇಶ್ವರಿ ನಗರದ ಓರ್ವ ವ್ಯಕ್ತಿ ನಿಸಾರ್ ಎಂಬಾತ ಮತ್ತು ಅಪ್ರಾಪ್ತ ಬಾಲಕನನ್ನು ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಾಗಮಂಡಲ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇತ್ತ ಬಂಧಿತ ನಿಸಾರ್ ಸಹ ಗ್ರಾಮಸ್ಥರ ವಿರುದ್ಧ ಪ್ರತಿದೂರು ನೀಡಿದ್ದಾನೆ.