ಚೆಟ್ಟಳ್ಳಿಯ ಭಗವತಿ ದೇವಾಲಯದಲ್ಲಿ ನಡೆದ ಕೈಲು ಮುಹೂರ್ತ ಧಾರೆ ಪೂಜೆ

ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲುಮುಹೂರ್ತ (ಕೈಲ್ ಪೊಳ್ದ್) ಹಬ್ಬದ ಧಾರೆ ಪೂಜೆ ನೆರವೇರಿಸಲಾಯಿತು. ಅರ್ಚಕರು ವಿಘ್ನೇಶ್ವರ, ನಾಗದೇವರಿಗೆ, ಕ್ಷೇತ್ರಪಾಲಕನಿಗೆ ಪೂಜೆ ಸಲ್ಲಿಸಿದರು.ಬಳಿಕ ಭಗವತಿಗೆ ಮಹಾಪೂಜೆ ನೆರವೇರಿತು.

ಹಬ್ಬದ ದಿನ ಯಾವುದೇ ಅಡ್ಡಿ,ಆತಂಕಗಳು ತೊಂದರೆಗಳು ಆಗದಂತೆ ಗ್ರಾಮದ ಹಿರಿಯರಾದ ಬಿಟ್ಟೀರ ಕಾವೇರಪ್ಪ ಊರಿನ ಪರವಾಗಿ ಪ್ರಾರ್ಥಿಸಿದರು. ಹಬ್ಬ ಮುಗಿದ ಮೂರು ದಿನದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಅರ್ಚಕರು ಗ್ರಾಮದ ಮುಖ್ಯಸ್ಥರಿಗೆ ತಿಳಿಸಿದರು.

error: Content is protected !!