fbpx

ಚುನಾವಣೆಯ ಬಿಸಿಯಲ್ಲಿ ವಾಗ್ಯುದ್ಧ ಶುರು!

ವಿಧಾನಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮರುಕ್ಷಣದ ಎರಡು ರಾಷ್ಟ್ರೀಯ ಪಕ್ಷಗಳಿಂದ ಟಾಕ್ ವಾರ್ ಆರಂಭವಾಗಿದೆ.

ನಾಮಪತ್ರ ಸಲ್ಲಿಕೆ ಬಳಿಕ ಪಕ್ಕದ ಜಿಲ್ಲೆಯ ಮಾಜಿ ಸಚಿವ ಎ.ಮಂಜು ಪುತ್ರ ಮಂಥರ್ ಗೌಡರನ್ನು ಕಣಕ್ಕೆ ಇಳಿಸಿದಕ್ಕೆ ಕೊಡಗಿನಲ್ಲಿ ಕಾಂಗ್ರೆಸ್ಗೆ ಅಭ್ಯಾರ್ಥಿಗಳಿಲ್ಲ ಎಂದು ಶಾಸಕ ಅಪಚ್ಚು ರಂಜನ್ ಕುಟುಕಿದ ಬೆನ್ನಲ್ಲೇ, ಇತ್ತ ಕಾಂಗ್ರೆಸ್ ನಿಂದ ಕೆ.ಪಿ ಚಂದ್ರಕಲಾ ಬಿಜೆಪಿಯ ರಿಗೆ ಅಣ್ಣತಮ್ಮಂದಿರು ಬಿಟ್ಟರೆ ಅಭ್ಯಾರ್ಥಿಗಳಿಲ್ಲ ಎಂದು ಮಡಿಕೇರಿಯಲ್ಲಿ ತಿರುಗೇಟು ನೀಡಿದ್ದಾರೆ.

ಇತ್ತ ಬಿಜೆಪಿ ಅಭ್ಯಾರ್ಥಿ ಸುಜಾಕುಶಾಲಪ್ಪ ಅತ್ಯಧಿಕ ಮತಗಳಿಂದ ಜಯ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರೆ, ಕಾಂಗ್ರೆಸ್ಸಿನ ಅಭ್ಯಾರ್ಥಿ ಮಂಥರ್ ಗೌಡ ತನಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಯಕನಾಗಿಯಲ್ಲದೆ, ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿಯುವುದಾಗಿ ತಿಳಿಸಿದ್ದಾರೆ.

error: Content is protected !!