fbpx

ಚುನಾವಣೆಗೆ ಸಜ್ಜಾಗುತ್ತಿರುವಾಗಲೇ ಬಿಜೆಪಿಗೆ ಆಘಾತ

ಮುಂಬೈ(ಅ.24): ಒಂದೆಡೆ ಕೊರೋನಾ ಅಟ್ಟಹಾಸ ದೇಶಾದ್ಯಂತ ಜನರನ್ನು ಕಂಗೆಡಿಸಿದೆ. ಹೀಗಿರುವಾಗಲೇ ಬಿಹಾರ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಬಿಜೆಪಿ ಹಾಗೂ ನಿತೀಶ್ ಕುಮಾರ್ ಈ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದೆ. ಹೀಗಿರುವಾಗಲೇ ಇತ್ತ ಯುಪಿಎ ಕೂಡಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ರೀತಿಯ ಕಸರತ್ತು ನಡೆಸುತ್ತಿದೆ. ಆದರೀಗ ಈ ಎಲ್ಲಾ ಪೈಪೋಟಿಯ ನಡುವೆ ಬಿಜೆಪಿಗೆ ಬಹುದೊಡ್ಡ ಆಘಾತಕಾರಿ ಸುದ್ದಿ ಬಂದೆರಗಿದೆ.

ಹೌದು ಬಿಹಾರದಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಇದರ ಉಸ್ತುವಾರಿಯನ್ನು ದೇವೇಂದ್ರ ಫಡ್ನವಿಸ್‌ಗೆ ವಹಿಸಿತ್ತು. ಹೀಗಿರುವಾಗಲೇ ಈಗ ಮಹಾಮಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್‌ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚುನಾವಣೆಯ ಹೊಸ್ತಿಲಲ್ಲಿ ಬಿಹಾರ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಫಡ್ನವೀಸ್‌ಗೆ ಕೊರೋನಾ ತಗುಲಿರುವುದು ಪಕ್ಷಕ್ಕೆ ಬಹುದೊಡ್ಡ ಆಘಾತ ನೀಡಿದೆ.

error: Content is protected !!