fbpx

ಚೀನೀ Appಗಳನ್ನು ಬಳಸಿ, ದೇಶ ದ್ರೋಹ ಮಾಡಬೇಡಿ…

ಭಾರತಕ್ಕೆ ಚೀನಾದ ತಗಾದೆ ಹೊಸದೇನಲ್ಲ. ಭಾರತದ ಅಧಿಕೃತ ನೆರೆ ರಾಷ್ಟ್ರವಲ್ಲದಿದ್ದರೂ, ಅದು ಟಿಬೆಟ್ ಆಕ್ರಮಿಸಿಕೊಂಡು ಬಂದು ನಮ್ಮ ಪಕ್ಕದಲ್ಲೇ ಝಾಂಡಾ ಊರಿದೆ. ನೆರೆ ರಾಷ್ಟ್ರವಾಗಿ ಕೂಡ ನಿರಂತರ ಅದರ ನೀಚ್ಛತನ ಒಂದಲ್ಲಾ ಒಂದು ರೀತಿಯಲ್ಲಿ ತೋರಿಸುತ್ತಲೇ ಇದೆ.


ಚೀನಾ-ಇಂಡೋ ಗಡಿಯಲ್ಲಿ ಸೇನಾ ಜಮಾವಣೆ ಮಾಡಿ,ಯುದ್ಧಕ್ಕೆ ಸಿದ್ಧವಾಗಿ ಹಲ್ಲು ಮಸೆಯುತ್ತಿದೆ ಚೀನಾ. ಈಗಾಗಲೇ ಅದರಿಂದಾಗಿ ಸಂಘರ್ಷ ಉಂಟಾಗಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯರಾಗಿ ನಾವೇನು ಮಾಡುತ್ತಿದ್ದೇವೆ? ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿಯನ್ನು ವಾಟ್ಸ್ ಅಪ್, ಫೇಸ್ ಬುಕ್ ಅಲ್ಲಿ ಸಲ್ಲಿಸಿ, ಚೀನಾ ಉತ್ಪಾದಿತ ಕೊರೋನಾ ವೈರಸ್ ಬಾಧೆಯಿಂದ ತತ್ತರಿಸಿ ಹೋಗಿ, PUBG, Tiktok ಬಳಸುತ್ತಾ‌ ಆರಾಮಾಗಿ ಇದ್ದೇವೆ.

ನೀವು ಶೂಟ್ ಮಾಡುತ್ತಿರುವುದು ಸ್ವದೇಶಿ ಸೈನಿಕರನ್ನೇ…

PUBG ಅಪ್ಲಿಕೇಶನ್ ಅಲ್ಲಿ ಕೆಲವರು ದಿನವಿಡೀ ಆಟವಾಡುವವರು ಇದ್ದಾರೆ. ಅದರಲ್ಲಿ ಅವರ ಗುರಿ ಇಟ್ಟು ಗುಂಡು ಹೊಡೆಯುವುದು ಭಾರತ ಸೈನಿಕರನ್ನೇ…
ಏಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಯಾವ ಶತ್ರು ನಮ್ಮ ದೇಶದ ಸೈನಿಕನನ್ನು ಹತನಾಗಿಸುತ್ತಿದೆಯೋ ಅದೇ ಶತ್ರುವಿನ ಕಿಸೆಗೆ‌ PUBG ಬಳಸಿ ಹಣ ತುಂಬುತ್ತಿದ್ದೇವೆ. ಈವರೆಗೆ ಭಾರತದ 22.9 ಮಿಲಿಯನ್ ಜನ ಮಾಮೂಲಿ ಬಳಕೆದಾರರಿದ್ದಾರೆ. ಮತ್ತು ಅದು ಜಾಸ್ತಿಯಾಗುತ್ತಲೇ ಇದೆ. ಈ ಚೀನೀ ಅಪ್ಲಿಕೇಶನ್ ನಿಂದ ಬಂದ ಹಣ ಸೇರುತ್ತಿರುವುದು ಚೀನಾ ಎಂಬ ಕಮ್ಯುನಿಷ್ಟ್ ಕಂತ್ರಿ ರಾಷ್ಟ್ರವನ್ನೇ.

ನಿಮ್ಮ ಪ್ರತಿಭಾ ಪ್ರದರ್ಶನದ ಸಲುವಾಗಿ ದೇಶದ್ರೋಹ ಎಸಗಬೇಡಿ

ನಮ್ಮ ದೇಶದ ಗಡಿಯಲ್ಲಿ ನಿಂತು ದೇಶ ಕಾಯುವ ಯೋಧನನ್ನು ನಾವೆಲ್ಲರೂ ದಿನವೂ ನೆನೆಸಿಕೊಳ್ಳುತ್ತೇವೆಯೋ ಇಲ್ಲವೋ, ಕೆಲವರಿಗಂತೂ ದಿನಕ್ಕೆ ಟಿಕ್ ಟಾಕ್ ಬಳಸಲೇ ಬೇಕು. ಮುಖಕ್ಕೆ ಮೂರು ಕೆಜಿ ಮೇಕಪ್ ಬಳಿದುಕೊಂಡು, ನೋಡುವ ನೋಟ, ನುಲಿಯೋ ಮೈಮಾಟ ನೋಡಿದರೆ ಆಹಾ‌ ಎನ್ನುವಂತಿರುತ್ತದೆ‌. ಹೀಗಾಗಿ ಟಿಕ್ ಟಾಕ್ ನಿಂದಲೂ ಅಪರಿಮಿತಾದಾಯ ಚೀನಾದ ಪಾಲಾಗುತ್ತಿದೆ. ಅದರ ಅರಿವಿಲ್ಲದ ಬಹುತೇಕ ಅಜ್ಞಾನಿಗಳು ಅಂಧರಂತೆ, ಅಂದವಾಗಿ ಅಲಂಕಾರ ಮಾಡಿಕೊಂಡು ಪ್ರಚಂಡ ಪ್ರತಿಭಾವಂತರಂತೆ ನಟಿಸುತ್ತಾ, ನುಲಿಯುತ್ತಲೇ ಇದ್ದಾರೆ TikTok ಅಲ್ಲಿ. ನೋಡೋಕೆ ಎರಡು ಕಣ್ಣು ಸಾಲದು.

ಭಾರತೀಯರ ಮೂರ್ಖತನ ಇಷ್ಟಕ್ಕೆ ನಿಂತಿಲ್ಲ…

ನಾವು ಭಾರತೀಯರು ಮೂಢರಂತೆ ಚೀನಿ Appಗಳನ್ನು ಅತಿಯಾಗಿ ಬಳಸುತ್ತಲೇ ಇದ್ದೇವೆ. ಕೇವಲ Tik Took, PUBG ಮಾತ್ರವಲ್ಲದೆ, Club Factory, Clash of Clans, Likes, Shareit, Camera360, Helo, UC Browser, Xender, BeautyPlus, Hago, WeChat, CamScanner, Turbo VPN ಚೀನೀ Appಗಳನ್ನೂ ಕೂಡ ಅತಿಯಾಗಿ ಭಾರತೀಯರು ಬಳಸುತ್ತಿದ್ದೇವೆ.


ಭಾರತೀಯರು ಬಳಸುವ Appಗಳಲ್ಲಿ ಹಿಂದೆ 18 ಚೀನೀ Applicationಗಳು Top listನಲ್ಲಿ ಇದ್ದವು. ಆದರೆ ಈಗ ಅದು 44 Application ಆಗಿದೆ. ಅಂದರೆ ಚೀನಾಗೆ ಮೊಬೈಲ್ Applicationಗಳಿಗೆ ಬರುತ್ತಿದ್ದ ಆದಾಯವನ್ನು ದುಪ್ಪಟ್ಟಾಗಿಸಿದ್ದೇವೆ. ಹಾಗಾಗಿ ಇವುಗಳ ಮೇಲಿನ ಬಂಡವಾಳವನ್ನು ಚೀನಾ ಜಾಸ್ತಿ ಮಾಡುತ್ತಲೇ ಇದೆ.

ಇನ್ನಾದರೂ ಬದಲಾಗೋಣ!

ಚೀನಾ ಉಪ್ಪನ್ನಗಳ ಬಳಕೆಯನ್ನು ಬಿಡುವುದಲ್ಲದೆ, ಚೀನೀ Mobile Appಗಳ ಬಳಕೆಯನ್ನೂ ನಾವು ಬಿಟ್ಟುಬಿಡೋಣ. ಅದರ ಮುಖಾಂತರ ನರೆಯ ರಾಷ್ಟ್ರ ಚೀನಾಗೆ ನಷ್ಟ ಮಾಡಿ, ನಮ್ಮ ದೇಶ ಭಕ್ತಿಯನ್ನು ಮೆರೆಯೋಣ…

error: Content is protected !!