fbpx

ಚೀನೀ ಆ್ಯಪ್ಸ್ ಪರ್ಯಾಯದ ತಯಾರಿಯಲ್ಲಿ ಭಾರತ ಮಗ್ನ…

ದೆಹೆಲಿ: ಮೊನ್ನೆ ಅಷ್ಟೇ ಕೇಂದ್ರ ಸರಕಾರವು ಚೀನಾ ದೇಶಕ್ಕೆ ಸೇರಿದ 118 ಆ್ಯಪ್ಸ್ ಗಳನ್ನು ನಿಷೇಧಿಸಿತ್ತು. ಈಗ ಭಾರತದಲ್ಲೇ ಅವುಗಳಿಗೆ ಪರ್ಯಾಯವಾಗುವಂತಹ ಮೊಬೈಲ್ ಆ್ಯಪ್ಸ್ ಗಳ ತಯಾರಿಯಲ್ಲಿ ಭಾರತವಿದೆ.

ಚೀನಾದ PUB-G ಗೇಮಿಂಗ್ ಆ್ಯಪ್ ನಿಷೇಧಗೊಂಡಿರುವುದು ಹಲವಾರು ಯುವ ವಯಸ್ಕರಿಗೆ ಶಾಕ್ ನೀಡಿತ್ತು. ಇದೀಗ ಬೆಂಗಳೂರಿನ ಮೂಲದ ಕಂಪೆನಿಯೊಂದು Fearless and United Guards (FAU-G) ಎಂಬ ಗೇಮಿಂಗ್ ಆ್ಯಪ್ ಒಂದನ್ನು ಸಿದ್ಧ ಪಡಿಸುತ್ತಿದ್ದು, ಇದು PUB-G ಗೆ ಪರ್ಯಾಯವಾಗಲಿದೆ‌ ಎಂದು ಹೇಳಲಾಗುತ್ತಿದೆ.

ಆಕ್ಟೋಬರ್ ತಿಂಗಳ ಕೊನೆಯಲ್ಲಿ ಇದು ಬಳಕೆಗೆ ಸಿಗಲಿದೆ ಎಂದು ಕಂಪೆನಿಯ ಮುಖ್ಯಸ್ಥರಾದ ವಿಶಾಲ್ ಗೊಂಡಾಲ್ ಅವರು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿತ್ತಿರುವ ಕನಸಾದ ಆತ್ಮ ನಿರ್ಭರ್ ಭಾರತದ ಆಶಯದಲ್ಲಿ ಈ ಆ್ಯಪ್ ಯನ್ನು ನಮ್ಮ ಕಂಪೆನಿ ತಯಾರಿಸಿದೆ ಎಂಬ ವಿಚಾರ ಸಂತಸವನ್ನು ತಂದಿದೆ ಎಂದಿದ್ದಾರೆ.

error: Content is protected !!