ಚೀನಾ ಕಂಪೆನಿಗಳನ್ನು ಹೊರಗಿಟ್ಟ ದೊಡ್ಡಣ್ಣ!

ವಾಶಿಂಗ್ಟನ್: ಅಮೆರಿಕದ ಲೆಕ್ಕಪರಿಶೋಧಕ ಮಾನದಂಡಗಳನ್ನು ಅಳವಡಿಸಿಕೊಳ್ಳದ ಚೀನಾದ ಕಂಪೆನಿಗಳನ್ನು ಅಮೆರಿಕದ ಶೇರು ವಿನಿಮಯ ಕೇಂದ್ರಗಳಿಂದ ಹೊರಗಿಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

‘ದ ಹೋಲ್ಡಿಂಗ್ ಫಾರೀನ್ ಕಂಪೆನೀಸ್ ಅಕೌಂಟೇಬಲ್ ಆಯಕ್ಟ್’ ಮಸೂದೆಯು ಅಮೆರಿಕದ ಸಾರ್ವಜನಿಕ ಲೆಕ್ಕಪರಿಶೋಧನಾ ಉಸ್ತುವಾರಿ ಮಂಡಳಿಯ ಲೆಕ್ಕಪರಿಶೋಧನಾ ಮಾನದಂಡಗಳನ್ನು ಸತತ ಮೂರು ವರ್ಷಗಳ ಕಾಲ ಅನುಸರಿಸದ ವಿದೇಶಿ ಕಂಪೆನಿಗಳನ್ನು ಅಮೆರಿಕದ ಯಾವುದೇ ಶೇರು ಮಾರುಕಟ್ಟೆಯಿಂದ ತೆಗೆದುಹಾಕುತ್ತದೆ.

ಈ ಕಾಯಿದೆಯು ಎಲ್ಲ ದೇಶಗಳಿಗೆ ಅನ್ವಯಿಸುತ್ತದಾದರೂ, ಅಲಿಬಾಬ, ತಂತ್ರಜ್ಞಾನ ಕಂಪೆನಿ ಪಿಂಡುಒಡುವೊ ಇಂಕ್ ಮತ್ತು ತೈಲ ಕಂಪೆನಿ ಪೆಟ್ರೋಚೀನಾ ಕೊ ಲಿಮಿಟೆಡ್ ಮುಂತಾದ ಚೀನಾದ ಕಂಪೆನಿಗಳಿಗೆ ಅನ್ವಯಿಸಲು ಕಾಯಿದೆಯ ಪ್ರಾಯೋಜಕರು ಬಯಸಿದ್ದಾರೆ ಎನ್ನಲಾಗಿದೆ.

error: Content is protected !!