fbpx

ಚೀನಾದ ಕಮ್ಯುನಿಷ್ಟ ಪಕ್ಷ ಸೇರುವ ಇಂಗಿದ ವ್ಯಕ್ತಪಡಿಸಿದ ಜಾಕಿಚಾನ್!

ಬೀಜಿಂಗ್: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪಕ್ಷ ಸೇರ್ಪಡೆಯಾಗುವ ಕುರಿತು ಹಾಲಿವುಡ್ ನ ಖ್ಯಾತ ನಟ ಹಾಗೂ ಮಾರ್ಷಲ್ ಆರ್ಟ್ ಪಟು ಜಾಕಿಚಾನ್ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಜಾಕಿಚಾನ್ ಚೀನಾ ಚಿತ್ರೋದ್ಯಮದ ಹಲವು ಪ್ರಮುಖರು ಭಾಗಿಯಾಗಿದ್ದ, ವಿಚಾರಗೋಷ್ಠಿಯೊಂದರಲ್ಲಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು, ಹಾಂಕಾಂಗ್ ನಲ್ಲಿ ಪ್ರಜಾಪ್ರಭುತ್ವ ಹೋರಾಟಗಾರರ ಮೇಲೆ ಚೀನಾ ನಡೆಸಿದ ದಬ್ಬಾಳಿಕೆಯನ್ನು ಸಮರ್ಥಿಸಿಕೊಂಡಿದ್ದಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದರು.

ಈಗ ಚೀನಾ ಕಮ್ಯುನಿಸ್ಟ್ ಪಕ್ಷ ಸದಸ್ಯನಾಗಲು ಬಯಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಚೀನಾ ಕಮ್ಯುನಿಸ್ಟ್ ಪಾರ್ಟಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮಾಡಿದ ಭಾಷಣದ ಕುರಿತಾಗಿ ನಡೆದ ವಿಚಾರಗೋಷ್ಠಿಯಲ್ಲಿ ಭಾಗಿಯಾಗಿದ್ದ 67 ವರ್ಷದ ಜಾಕಿ ಚಾನ್ ಪಕ್ಷದ ಸದಸ್ಯನಾಗುವ ಮಾತನಾಡಿದ್ದಾರೆ.

error: Content is protected !!