fbpx

ಚೀನಾಗೆ ಕೆಟ್ಟರೂ ಬುದ್ಧಿ ಬರುತ್ತಿಲ್ಲ…!

ಚೀನಾ ವಿಲಕ್ಷಣತೆಗೆ ಮತ್ತೊಂದು ಹೆಸರು ಎನ್ನಬಹುಸು. ಕೊರೋನಾ ಸೊಂಕನ್ನು ಜಗತ್ತಿನೆಲ್ಲೆಡೆ ಸೊಂಕು ಹರಡಿ ನೆಮ್ಮದಿಯಿಂದ ಇದೆ ಚೀನಾ. ಎರಡನೇ ಸುತ್ತಿನ ಕೊರೋನಾ ತೀವ್ರತೆ ಚೀನಾವನ್ನು ಕಾಡುತ್ತಿದೆಯಾದರೂ ಅದು ನಾಯಿ ಮಾಂಸ ಹಾಗು ಲಿಚ್ಚಿ ಹಣ್ಣುಗಳ ಹಬ್ಬ ಮುಂದುವರೆಸಿದೆ. ಈ ತಿಂಗಳ 21ಕ್ಕೆ ಶುರುವಾಗಿದ್ದು, ಅವುಗಳ ಮಾರಣ ಹೋಮ 30ರ ತನಕವೂ ನಿರಾತಂಕವಾಗಿ ನಡೆಯಲಿದೆ‌.

ಈ ಕ್ರೂರ ಹಬ್ಬ 21 ಜೂನ್ 2009ರಲ್ಲಿ ಗಯಾಂಗ್ಸಿ ಪ್ರಾಂತ್ಯದ ಯುಲಿನ್ ನಗರದಲ್ಲಿ ಮೊದಲು ಆರಂಭಿಸಲಾಯಿತು. ಶುರುವಾದ ವರ್ಷಗಳಲ್ಲಿ ಮೊದಮೊದಲು 10,000 ನಾಯಿಗಳನ್ನು ಸಾಯಿಸಿ ಭಕ್ಷಿಸಲಾಗುತ್ತಿತ್ತು.

ನಾಯಿಗಳನ್ನು ಪಂಜರದಲ್ಲಿ ಬಲಿಕೊಡಲು ಕೂಡಿ ಹಾಕಿರುವ ಸಾಂದರ್ಭಿಕ ಚಿತ್ರ.

ಏನು ಕಾರಣ ಈ ಹಬ್ಬದ ಆಚರಣೆಗೆ?

ಇಂತದ್ದೊಂದು ಅಮಾನುಷ ವಿಕೃತ ಹಬ್ಬ ಶುರುವಾಗಲು ವಿಚಿತ್ರ ಕಾರಣ ಬಹಳ ವಿಚಿತ್ರ. ನಾಯಿ ಮಾಂಸ ತಿನ್ನುವುದು ಚೀನಿಯರ ಸಂಪ್ರದಾಯವಂತೆ. ಮತ್ತು ಅದು ಒಳ್ಳೆಯ ಅದೃಷ್ಟದ ಜೊತೆಗೆ‌ ಉತ್ತಮ ಆರೋಗ್ಯ ನೀಡುತ್ತದೆ ಎಂದು ಮೂಢವಾಗಿ ಮೂರ್ಖ ಚೀನಿಯರು ನಂಬುತ್ತಾರೆ.

ಈ ಅನಿಷ್ಟ ಹಬ್ಬಕ್ಕೆ ತೀವ್ರ ವಿರೋಧ

2016ರಲ್ಲಿ ಮಿಲಿಯನ್ ಗಟ್ಟಲೆ ಚೀನಿಯರು ಈ ಹಬ್ಬದ ವಿರುದ್ಧವಾಗಿ ಧ್ವನಿ ಎತ್ತಿದರು. ಚೀನಾದ ರಾಷ್ಟ್ರೀಯ ಜನತಾ ಕಾಂಗ್ರೆಸ್ಸಿನ ಉಸ್ತುವಾರಿ ಜ಼ೆನ್ ಜಿ಼ಯಾಒಹೆ ಅವರು ನಾಯಿ ಮಾಂಸದ ಹಬ್ಬವನ್ನು ನಿಷೇಧಿಸುವ ಹೋರಾಟದ ನಾಯಕತ್ವ ವಹಿಸಿಕೊಂಡು ಅಭಿಯಾನ ನಡೆಸಿದ್ದರು.

ಅದೇ ವರ್ಷ 11 ಮಿಲಿಯನ್ ಜನರ‌ ಸಹಿ ಸಂಗ್ರಹ ಮಾಡಿ, ನಾಯಿ ಮಾಂಸದ ಹಬ್ಬವನ್ನು ಸಂಪೂರ್ಣವಾಗಿ ನಿಲ್ಲಿಸಲು ಜನ ಯುಲಿನ್ ಸರಕಾರದ ಬೀಜಿ಼ಂಗ್ ಅಲ್ಲಿದ್ದ ಕಛೇರಿಗೆ ನೀಡಲಾಗಿತ್ತು. 2014 ರಿಂದ 2016ರವರೆಗೆ ಈ ಅನಿಷ್ಠ ಹಬ್ಬಕ್ಕೆ ಚೀನಿಯರ ತೀವ್ರ ವಿರೋಧ ವ್ಯಕ್ತವಾಯಿತು.

ಮಾಧ್ಯಮ ಆಂಧೋಲನ

ಟ್ವಟರ್, ಫೇಸ್ ಬುಕ್, ಇನ್ಟಾಗ್ರಾಮ್ ಗಳಲ್ಲಿ ಈ ನಾಯಿ ಮಾಂಸದ ಹಬ್ಬದ ಕುರಿತು ಬಾರಿ ವಿರೋಧ ಹಾಗು ಆಕ್ಷೇಪ ಬಂತು. ಅದ‌ನ್ನು ತಡೆಯುವ ಕುರಿತಾಗಿ #stopulinforever, #notodogmeat, stopyulin2015, stopulin2016 ಎಂಬ ಸಾಮಾಜಿಕ ಜಾಲತಾಣದ ಆಂಧೋಲನ ಬದಲಾವಣೆ ತರಲು ಕಾರಣವಾದವು. ಪ್ರತಿ ವರ್ಷ 10,000 ನಾಯಿಗಳ ಪ್ರಾಣ ಹರಣ ನಡೆಯುತ್ತಿತ್ತು 2015ರಿಂದ ಅದು 1,000 ಸಂಖ್ಯೆಗೆ ಇಳಿಕೆ ಕಂಡಿದೆ.

ವನ್ಯ ಜೀವಿಗಳ ರಕ್ಷಣೆಗೆ ಪ್ರಾಣಿ ದಯಾ ಸಂಘಟನೆಗಳು ಅಲ್ಲಿ ನಿರಂತರ ಹೋರಾಟ ನಡೆಯುತ್ತಲೇ ಇದ್ದರೂ ಅದನ್ನು ಕಮ್ಯುನಿಷ್ಟ್ ಆಡಳಿತದ ಪರಿಣಾಮದ ಫಲವಾಗಿ ತಡೆಯಲು ಆಗುತ್ತಿಲ್ಲ.

ದಯವಿಲ್ಲದ ಧರ್ಮವದೇವುದಯ್ಯ?

ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!

ದಯವೇ ಧರ್ಮದ ಮೂಲವಯ್ಯ

ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!

ಎಂಬ ವಚನ ಸಾಹಿತ್ಯ ಭೋಧನೆ ನೀಡುವ ನಾಡಿನಲ್ಲಿ ಹಾಗು ‘Live and Let Live’ ಎಂದು ಪ್ರತಿಪಾದಿಸುವ ತತ್ವಗಳನ್ನು ಸಾರುವ ದೇಶದಲ್ಲಿ ಹುಟ್ಟಿರುವ ನಾವೇ ಧನ್ಯ ಅನ್ನಿಸುತ್ತದೆ.

ಅದಕ್ಕೆ ಚೀನಾದ ಗೋಡೆ ಮೇಲೆ ಅವರೇ ಫಕವೊಂದನ್ನು ಹಾಕಿರುತ್ತಾರೆ

ಭಾಗ್ಯ ಇದ್ದರೆ ಮಾತ್ರ ನೀನು ಭಾರತ ಎಂಬ ಪುಣ್ಯ ಭೂಮಿಯಲ್ಲಿ ಜನಿಸಲು ಸಾಧ್ಯ” ಎಂದು

error: Content is protected !!