ಚಿರತೆ ದಾಳಿಗೆ ಕಾರ್ಮಿಕನಿಗೆ ಗಾಯ

ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾರ್ಮಿಕನ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ನಡೆದಿದೆ.ಇಲ್ಲಿನ ಮಾರ್ಗೋಲಿ ಎಸ್ಟೇಟ್ ನಲ್ಲಿ ವಿದ್ಯುತ್ ಸಂಪರ್ಕ ಪರಿಶೀಲನಗೆ ತೆರಳುತ್ತಿದ್ದ ಕಾರ್ಮಿಕ ಪ್ರಭು ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದ್ದು ಗಂಭೀರವಾಗಿ ಗಾಯಗೊಳಿಸಿದೆ.ಪ್ರಭುರವರನ್ನು ಸಿದ್ದಾಪುರ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.