ಚಿರತೆ ಚರ್ಮ ವಶ ಓರ್ವನ ಬಂಧನ

ಕೊಡಗು: ವಿರಾಜಪೇಟೆಯ ಐಮಂಗಲ ಬಳಿ ಸಿಐಡಿ ಪೋಲಿಸ್ ಮತ್ತು ಅರಣ್ಯ ಸಂಚಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ವ್ಯಕ್ತಿಗಳಿಬ್ಬರು ಎರಡು ಚಿರತೆ ಚರ್ಮ ಮಾರಾಟ ಮಾಡಲು ತೆರಳುತ್ತಿದ್ದ ಸಂದರ್ಭ ಸಿಕ್ಕಿಬಿದ್ದಿದ್ದಾರೆ. ಸುಂಟಿಕೊಪ್ಪದಲ್ಲಿ ಮಾಂಸ ವ್ಯಾಪಾರ ಮಾಡಿಕೊಂಡಿದ್ದ ಮೊಹಮದ್ ಕಬೀರ್ ಮತ್ತುಎಡಪಾಲ ಗ್ರಾಮದ ರಶೀದ್ ಬೈಕ್ ನಲ್ಲಿ ಚಿರತೆ ಚರ್ಮ ಮಾರಾಟ ಮಾಡಲು ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೋಲಿಸರ ಸಹಾಯದಿಂದ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿತ್ತು,ಹೀಗೆ ಚರ್ಮ ಹೊತ್ತು ಐದು ಲಕ್ಷದ ಡೀಲ್ ಕುದುರಿಸಿ ಮಾರಾಟಕ್ಕೆ ತೆರಳುವ ಸಂದರ್ಭ ಸಿಕ್ಕಿ ಬಿದ್ದಿದ್ದು,ಎರಡು ಚರ್ಮ ಸೇರಿದಂತೆ ಬೈಕ್ ಮತು ಮೊಹಮದ್ ಕಬೀರ್ ನನ್ನು ವಶಕ್ಕೆ ಪಡೆಯಲಾಗಿದ್ದು,ಹಿಂಬದಿ ಸವಾರ ರಶೀದ್ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದು,ಈತನ ಶೋಧಕಾರ್ಯ ನಡೆಸಲಾಗುತ್ತಿದೆ.