ಚಿರತೆಗಳ ಸಾವಿಗೆ ನಾಯಿ ಕಾರಣ: ತನಿಖೆಯಿಂದ ದೃಢ!

ಮೈಸೂರು: ಇಲ್ಲಿನ ಬೆಳವಾಡಿ ಕೈಗಾರಿಕಾ ಪ್ರದೇಶದಲ್ಲಿ ಮೂರು ಚಿರತೆಗಳ ಸಾವಿಗೆ ವಿಷ ಆಹಾರ ಸೇವಿಸಿದ್ದ ನಾಯಿಯನ್ನು ಬೇಟೆ ಮಾಡಿರುವುದೇ ಅವುಗಳ ಸಾವಿಗೆ ಕಾರಣ ಎಂದು ಪ್ರಾಥಮಿಕ ತದಿಖೆಯಿಂದ ತಿಳಿದು ಬಂದಿದೆ.

ಮೈಸೂರಿನಲ್ಲಿ ನಿನ್ನೆ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆಗಳ ಚಿತ್ರಗಳು

ಇಲ್ಲಿನ ಬೆಮೆಲ್ ಕೈಗಾರಿಕೆ ಆವರಣದಲ್ಲಿ ಅಡ್ಡಾಡಿಕೊಂಡಿದ್ದ 4-5 ವರ್ಷದ ತಾಯಿ ಚಿರತೆ ಮತ್ತು ಅಂದಾಜು 8-10 ತಿಂಗಳ ಮರಿಗಳು ಇಲ್ಲೇ ಸಮೀಪದ ಕೆರೆಯ ಬಳಿ ಬೇಟೆಯಾಡಿ, ಮಾಂಸವನ್ನು ತಿಂದಿದೆ. ಘಟನಾ ಸ್ಥಳದಲ್ಲಿ ನಾಯಿಯ ಕಳೆಬರ ಮತ್ತು ಆಹಾರ ಪೊಟ್ಟಣ ಸಿಕ್ಕಿದ್ದು, ಚಿರತೆಗಳು ಅಕ್ಕಪಕ್ಕದ ಮಾವಿನ ತೋಪಿನಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಪಕ್ಕದ ಜಮೀನಿನವರು ನಾಯಿಗೆ ವಿಷ ಆಹಾರ ನೀಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ವನ್ಯಜೀವಿ ಕಾಯ್ದೆ ಅಡಿಯಲ್ಲಿ ತನಿಖೆ ಚುರುಕುಗೊಂಡಿದೆ.

error: Content is protected !!