ಚಿಪ್ಪು ಹಂದಿ ಮಾರಾಟ ಯತ್ನ; ಆರೋಪಿಯ ಬಂಧನ

ಪ್ಯಾಂಗೋಲೀನ್ (ಚಿಪ್ಪು ಹಂದಿ) ಯ ಬೆಲೆಬಾಳುವ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಡಿಕೇರಿಯ ಹೊರವಲಯದ ಕಾಟಗೇರಿಯಲ್ಲಿ ಬಂಧಿಸಲಾಗಿದೆ.
ಕೊಡಗು ಸಿ.ಐ.ಡಿ ಪೊಲೀಸರ ಅರಣ್ಯ ಘಟಕದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಅಪ್ಪಯ್ಯ ಎಂಬಾತ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆದಿದ್ದು, ಮಾಲು ಸಮೇತ ಬಂಧಿತನನ್ನು ನ್ಯಾಯಾಂಗ ಬಂಧನ ಕ್ಕೆ ಒಪ್ಪಿಸಲಾಗಿದೆ.