fbpx

ಚಿನ್ನದ ಪದಕ ಗೆದ್ದ ಕೊಡಗಿನ ತರುಣ ಓಟಗಾರ

ಕುಶಾಲನಗರದ ಗಡ್ಡಗಾಡು ಓಟಗಾರ ನಿತಿನ್ ಕುಮಾರ್ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ “ಬೆಂಗಳೂರು ರನ್ನರ್ಸ್ ಜಾತ್ರೆ” ಯಲ್ಲಿ ಚಿನ್ನದ ಪದಕ ಗಳಿಸಿದ್ದಾನೆ.

ರಾಜ್ಯ ಮಟ್ಟದ ಸ್ಪರ್ಧೆ ಇದಾಗಿದ್ದು 10 ಕಿ.ಮೀ ಪುರುಷರ ಮುಕ್ತ ಸ್ಪರ್ಧೆಯಲ್ಲಿ ನಿಗದಿತ ದೂರವನ್ನು 32 ನಿಮಿಷ 27 ಸೆಕೆಂಡ್ ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗಿಟ್ಟಿಸಿಕೊಂಡಿದ್ದಾರೆ. ಇದಲ್ಲದೆ ಚಿಕ್ಕಮಗಳೂರಿನಲ್ಲಿ ನಡೆದ “ಚಿಕ್ಕಮಗಳೂರು ವೈಲ್ಡರ್ಸ್ ರನ್ ಅಂಡ್ ರೀಡ್ ” ಸ್ಪರ್ಧೆಯ 10 ಕಿಲೋಮೀಟರ್ ಓಟದ ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದಿದ್ದಾರೆ.

ರಾಜ್ಯದ ವಿವಿಧ ಕಡಡೆಗಳಲ್ಲಿ ನಡೆದ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪದಕ ಪಡೆದ ಅಪ್ರತಿಮ ಸಾಧಕ ಮುರುಗ ಮತ್ತು ಮಂಜುಳ ದಂಪತಿಯ ಪುತ್ರ.

error: Content is protected !!