ಚಿತಾಗಾರದ ಸಿಲಿಕಾನ್ ಚೇಂಬರ್ ಲೋಕಾರ್ಪಣೆ

ಸೋಮವಾರಪೇಟೆ ಪಟ್ಟಣಪಂಚಾಯ್ತಿ ವತಿಯಿಂದ ಕರ್ಕಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಹಿಂದುರುದ್ರ ಭೂಮಿ ಮುಕ್ತಿ ದಾಮಕ್ಕೆ 2 ಲಕ್ಷ ರೂ ವೆಚ್ಚದಲ್ಲಿ ರೋಟರಿ ಸಂಸ್ಥೆ ನೀಡಿದ ಚಿತಾಗಾರ(ಸಿಲಿಕಾನ್ ಚೆ0ಬರ್) ಅನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಸೋಮವಾರಪೇಟೆ ಸುತ್ತ ಮುತ್ತಲ ಜನತೆ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡುವಂತಾಗಿತ್ತು ಇದೀಗ ಸಮಸ್ಯೆ ಬಗೆಹರಿದಂತಾಗಿದ್ದು,ಸಾರ್ವಜನಿಕ ಸಂಘ ಸಂಸ್ಥೆಗಳು ಇಂತ ಕಾರ್ಯಕ್ಕೆ ಕೈ ಜೋಡಿಸುವುದು ಸ್ಲಾಘನೀಯ ಎಂದರು.