ಚಿಕ್ಕತ್ತೂರು ಶ್ರೀ ಕೃಷ್ಣ ಗೋ ಶಾಲೆ ಆರ್ಥಿಕ ಸಂಕಷ್ಟ: ಮುಚ್ಚುವ ಭೀತಿ

ಕೊಡಗಿನ ಕರಾಳ ಪ್ರಾಕೃತಿಕ ವಿಕೋಪ ಸಂದರ್ಭ ಅನಾಥವಾಗಿದ್ದ ಜಾನುವಾರುಗಳನ್ನು ಕಟುಕರ,ಪಾಲಾಗದಂತೆ ತಡೆಯಲು ಕುಶಾಲನಗರ ತಾಲ್ಲೂಕಿನ ಚಿಕ್ಕತ್ತೂರು ಗ್ರಾಮದಲ್ಲಿ ಗೋಶಾಲೆ ನಿರ್ಮಿಸಿ ಆಶ್ರಯ ನೀಡಿದ್ದ ಭಾಗಮಂಡಲ, ಚೆಟ್ಟಿಮಾನಿಯ ಮತ್ತೊಂದು ಶ್ರೀ ಕೃಷ್ಣ ಗೋ ಶಾಲೆ ಇದೀಗ ಮುಚ್ಚುವ ಪರಿಸ್ಥಿತಿಗೆ ಬಂದು ತಲುಪಿದೆ.

ಒಂದೆಡೆ ದಾನಿಗಳಿಗೂ ಕೊರತೆ, ಆಗಿಂದಾಗ್ಗೆ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಆರಂಭದಲ್ಲಿ ಭಾಗಮಂಡಲದಲ್ಲಿ ಸ್ಥಾಪನೆಯಾದ ಗೋಶಾಲೆ, ಹವಮಾನದ ವೈಪರೀತ್ಯ ಪರಿಣಾಮ, ಕುಶಾಲನಗರದ ಕೂಡುಮಂಗಳೂರಿನ ಚಿಕ್ಕತ್ತೂರು ಗ್ರಾಮ ಆಯ್ಕೆ ಮಾಡಿ 3.60 ಏಕರೆಯನ್ನು ವಿವಿಧ ಟ್ರಸ್ಟ್ ಗಳ ಸಹಾಯದಿಂದ ಆರಂಭಗೊಂಡ ಗೋಶಾಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ ಭಾಗದ 60 ಜಾನುವಾರುಗಳಿದ್ದವು, ಆರಂಭಿಕ ಶೂರರಂತೆ ವರ್ತಿಸಿದ ಹಲವು ಸಂಘಟನೆಗಳು ಕೈಕೊಟ್ಟ ಹಿನ್ನಲೆಯಿಂದ ನಿರ್ವಾಹಣೆ ಮತ್ತು ಜಾನುವಾರುಗಳು ಮೃತಪಡಲು ಕಾರಣವಾಗಿದೆ ಎಂದು ಟ್ರಸ್ಟಿನ ಸಂಸ್ಥಾಪಕರಾದ ಹರೀಶ್ ಆಚಾರ್ಯ ತಿಳಿಸಿದ್ದಾರೆ.

ಕಾರ್ಮಿಕರ ಕೊರತೆ, ಒಣಹುಲ್ಲು ಹಸಿ ಹುಲ್ಲು ಪೌಷ್ಟಿಕ ಆಹಾರದ ಕೊರತೆ, ವೈದ್ಯಕೀಯ ಸೌಲಭ್ಯ ಎಲ್ಲದರಿಂದ ವಂಚಿತವಾಗಿರುವ ಈ ಗೋಶಾಲೆಗೆ ಸರ್ಕಾರವೇ ಪರಿಹಾರ ಒದಗಿಸಬೇಕಿದೆ.