fbpx

ಚಿಕೂನ್ ಗುನ್ಯ, ಡೆಂಗ್ಯೂ ಜೊತೆಗೆ ಝಿಂಕಾ ಭೀತಿ

ಸೋಮವಾರಪೇಟೆ ತಾಲ್ಲೂಕಿನಲ್ಲಿ ಈವರೆಗೆ ಸೊಳ್ಳೆಗಳಿಂದ ಹರಡಬಹುದಾದ ಡೆಂಗ್ಯು,ಚಿಕೂನ್ ಗುನ್ಯ ದ ಪ್ರಕರಣ ದಾಖಲಾಗಿದ್ದು ತಗ್ಗು ಪ್ರದೇಶದಲ್ಲಿ ಮಲೇರಿಯಾ ಮತ್ತು ಕೇರಳದ ಝಿಂಕ ವೈರಸ್ ಸಹಾ ತಗುಲಬಹುದೆಂದು ಸೋಮವಾರಪೇಟೆ ತಾಲ್ಲೂಕ್ ವೈಧ್ಯಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದ್ದಾರೆ. ತಮ್ಮ ವ್ಯಾಪ್ತಿಯ ತಾಲ್ಲೂಕಿನ ಕೂಡಿಗೆಯಲ್ಲಿ ಒಂದು ಚಿಕೂನ್ ಗುನ್ಯ,ಎರಡು ಡೆಂಗ್ಯು ಪ್ರಕರಣ ದಾಖಲಾದರೆ. ಗೌಡಳ್ಳಿಯಲ್ಲಿ ಎರಡು ,ಕೊಡ್ಲಿಪೇಟೆಯಲ್ಲಿ ಒಂದು ಡೆಂಗ್ಯೂ ಪತ್ತೆಯಾಗಿದ್ದು, ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಶಾ ಕಾರ್ಯಕರ್ತರು,ಸ್ಥಳೀಯ ಪಂಚಾಯ್ತಿಗೆ ತಿಳಿಸುವಂತೆ ಸೂಚಿಸಲಾಗಿದೆ.

error: Content is protected !!