ಚಾಲಕನ ನಿಯಂತ್ರಣ ತಪ್ಪಿ ಅಪಘಾತ

ಸುಂಟಿಕೊಪ್ಪ ಬಳಿಯ ಬಾಳೆಕಾಡು ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಬರೆಗೆ ಅಪ್ಪಳಿಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮೈಸೂರಿನಿಂದ ಮಡಿಕೇರಿಯತ್ತ ಬರುತ್ತಿದ್ದ ಕಾರು,ಮಳೆಯಿಂದ ಒದ್ದೆಯಾದ ರಸ್ತೆಯ ಪರಿಣಾಮ ನಿಯಂತ್ರಣ ಕಳೆದುಕೊಂಡಿದೆ.ಬಳಿಕ ಕಾರನ್ನು ಕ್ರೇನ್ ಮೂಲಕ ಹೊರ ತೆಗಿಯಲಾಯಿತು.