fbpx

ಚಲನಚಿತ್ರ ನಿರ್ದೇಶಕ ಎ.ಟಿ ರಘು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಕರ್ನಾಟಕ ಸರಕಾರ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಹಿರಿಯ ಚಲನಚಿತ್ರ ನಿರ್ದೇಶಕ ಎ.ಟಿ ರಘು ಅವರು ಭಾಜನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಚಿತ್ರಗಳನ್ನು ನೀಡಿದ ನಿರ್ದೇಶಕ ಎ.ಟಿ ರಘು. ಮೂಲತಃ ಕೊಡಗಿನವರಾದ ರಘು 1980-2004 ರ ವರೆಗೆ ಹಲವಾರು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ‌. ಇವರ ಹೆಚ್ಚಿನ ಚಿತ್ರದ ನಾಯಕ ನಟ ಅಂಬರೀಶ್.

ಅವಳ ನೆರಳು, ಮಿಡಿದ ಹೃದಯ, ಮೈಸೂರು ಜಾಣ, ಅಂತಿಮ ತೀರ್ಪು ಹೀಗೆ ಸುಮಾರು 30 ಕ್ಕೂ ಹೆಚ್ಚು ಜನಮೆಚ್ಚಿದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಮಂಡ್ಯದ ಗಂಡು ಅಂಬರೀಶ್ ಅವರಿಗೆ ದೊಡ್ಡ ಬ್ರೇಕ್ ನೀಡಿದ ಚಿತ್ರ‌. ಇದರ ನಿರ್ದೇಶಕರೂ ಕೂಡ ಇವರೇ. ಕನ್ನಡ ಅಲ್ಲದೆ ಮಲಯಾಳಂ, ಹಿಂದಿ ಮತ್ತು ಕೊಡವ ಭಾಷೆಯಲ್ಲಿಯೂ ಚಿತ್ರವನ್ನು ನಿರ್ದೇಶಿಸಿದ್ದಾರೆ.

ನಿರ್ದೇಶನ ಮಾತ್ರವಲ್ಲದೆ ನಟನೆ, ಚಿತ್ರಕಥೆಯಲ್ಲಿಯೂ ಸೈ ಎನಿಸಿಕೊಂಡವರು‌ ಇವರು.

ಅನಾರೋಗ್ಯದ ಕಾರಣದಿಂದ ಕೆಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಕೊಡಗಿನ ಪಾಲಿಗೆ ಸಂತಸದ ವಿಚಾರ‌.

error: Content is protected !!