ಗ್ರಾ.ಪಂ ಪಿಡಿಓಗೆ ಶಿಕ್ಷೆ

ನಿವೇಶನವೊಂದಕ್ಕೆ ದಾಖಲೆ ಮಾಡಿಕೊಡಲು 3 ಸಾವಿರ ಲಂಚ ಕೇಳಿದ ಪ್ರಕರಣ ಸಂಬಂಧ ನರಿಯಂದಡ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸಚಿನ್ ಎಂಬುವವರಿಗೆ ಕಲಂ 7 ಪಿ.ಸಿ ರ ಅಡಿಯಲ್ಲಿ 3 ವರ್ಷ ಸಜೆ,3 ಸಾವಿರ ದಂಡ ತಪ್ಪಿದ್ದಲ್ಲಿ 3 ತಿಂಗಳ ಸಜೆ ಮತ್ತು ಕಲಂ 13(2) ಪಿಸಿ ಕಾಯ್ದೆ ಅನ್ವಯ 4 ವರ್ಷ ಸಜೆ,ರೂ 5 ಸಾವಿರ ದಂಡ ಇದಕ್ಕೂ ತಪ್ಪಿದಲ್ಲಿ 6 ತಿಂಗಳ ಸಜೆ ಎಂದು ನ್ಯಾಯಾಧೀಶರಾದ ಜಿನರಾಳಕರ ಭೀಮರಾವ ಲಗಮಪ್ಪ ಶಿಕ್ಷೆ ಪ್ರಮಾಣ ಘೋಷಿಸಿ ತೀರ್ಪು ನೀಡಿದ್ದಾರೆ.

ನರಿಯಂದಡ ಗ್ರಾಮದ ಸುಬ್ರಮಣ್ಯ ಎಂಬುವವರ ಪಿತ್ರಾಜಿತ ಆಸ್ತಿ 10 ಸೆಂಟ್ ನಿವೇಶನಕ್ಕೆ ನಮೂನೆ 9 ಮತ್ತು 11 ಒದಗಿಸಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು,ಈ ಸಂದರ್ಭ ಪಿಡಿಒ ಸಚಿನ್ 3 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.

error: Content is protected !!