fbpx

ಗ್ರಾಮ ಪಂಚಾಯ್ತಿಯಿಂದ ನಡೆದ ವಾಡ್೯ ಸಭೆ

ತೊರಣಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ವಾರ್ಡ್ ಸಭೆ ಕಾರ್ಯಕ್ರಮ ಚಾಲನೆ ನೀಡಲಾಯಿತು.

ಮಾಲೂರು :- ತಾಲೂಕಿನ ತೊರಣಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ವಾರ್ಡ್ ಸಭೆ ನಡೆಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೇಣು ರವರು ಹೇಳಿದರು. ತಾಲೂಕಿನ ತೊರಣ ಹಳ್ಳಿ ಗ್ರಾಮ ಪಂಚಾಯ್ತಿ ಯಲ್ಲಿ ಸೋಮವಾರ ನಡೆದ ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಗ್ರಾಮ ನಮ್ಮ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಮುಂದಿನ 5 ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ವಾರ್ಡ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ತೊರಣ ಹಳ್ಳಿ ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯ ಹೆಡಗಿಬೆಲೆ, ಬೆಳ್ಳಾವಿ, ಸೀತಾನಾಯಕನಹಳ್ಳಿ, ಗೇರುಪುರ, ಬೈರ್ನಹಳ್ಳಿ, ಸೊಣ್ಣ ನಾಯಕನಹಳ್ಳಿಯಲ್ಲೂ ಪಂಚಾಯ್ತಿ ಸದಸ್ಯರು ಗ್ರಾಮದ ಮುಖಂಡರ ನೇತೃತ್ವದಲ್ಲಿ ವಾರ್ಡ್ ಸಭೆ ನಡೆಸಲಾಗಿದೆ. ಗ್ರಾಮಸ್ಥರ ಕುಂದುಕೊರತೆ ಆಲಿಸುವ ಜತೆಗೆ ಸಮಸ್ಯೆಗಳ ಪಟ್ಟಿ ಮಾಡಲಾಗಿದೆ ಎಂದರು.

ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ವೈಯುಕ್ತಿಕ ಸವಲತ್ತು ವಿತರಣೆ, ಮನೆ ನಿರ್ಮಾಣಕ್ಕೆ ಅರ್ಜಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಲಾಗುವುದು. ಅರ್ಹರಿಗೆ ಸವಲತ್ತು ಕಲ್ಪಿಸಲಾಗುವುದು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮುನಿಯಪ್ಪ ರವರು ಮಾತನಾಡಿ ನಮ್ಮ ಗ್ರಾಮ ನಮ್ಮ ಯೋಜನೆಯಡಿಯಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಸೇತುವೆ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಕ್ರಿಯಾಯೋಜನೆ ಸಿದ್ಧ ಪಡಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಈ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೇಣು, ಅಧ್ಯಕ್ಷರಾದ ಮುನಿಯಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಸುಮಿತ್ರ ಲೋಕೇಶ್, ಸದಸ್ಯರಾದ ನಾಗರತ್ನಮ್ಮ, ನಾಗವೇಣಮ್ಮ, ತಿಮ್ಮರಾಯಪ್ಪ, ಮಂಜುನಾಥ್, ವೆಂಕಟರಮಣಪ್ಪ, ಅಮರಾವತಿ, ನಾರಾಯಣಪ್ಪ, ನಾಗರತ್ನಮ್ಮ, ನಾಗರಾಜ್ ಬಿ ಎಂ, ರೂಪ ಬಿ ಆರ್, ಅಶ್ವತಮ್ಮ, ಶಿಲ್ಪ ಬಿ ಎ, ವೀರಭದ್ರ ಬಿ ಜೆ, ಸುಜಾತಾ, ಮುರಳಿ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!