ಗ್ರಾಮ ಪಂಚಾಯಿತಿ ಸದಸ್ಯನ ಮನೆ ಗೋಡೆ ಕುಸಿತ:ಪಕ್ಷದ ಮುಖಂಡರ ಭೇಟಿ

ಕುಶಾಲನಗರ ಕೂಡುಮಂಗಳೂರು ಗ್ರಾ.ಪಂನ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಮನೆ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯಾದಿಂದ ಪಾರಾಗಿದ್ದಾರೆ.
ಮನೆಯ ಗೋಡೆಗಳು ಮೊದಲೇ ಬಿರುಕು ಬಿದ್ದು, ಮನೆಯ ಗೋಡೆಗಳು ಕಳೆದೆರಡು ವರ್ಷಗಳಿಂದ ಬಿದ್ದ ಮಳೆಯಿಂದ ಶೀತಗೊಂಡಿದ್ದ ಹಿನ್ನಲೆ ಗೋಡೆ ಬಿದ್ದಿದೆ. ವಾರ್ಡ್ ನ ಜನರ ಮನೆಗಳಿಗೆ ಹಾನಿಯಾದಾಗ, ಪರಿಹಾರ ಕೊಡಿಸುತ್ತಿದ್ದ ಕೆ.ಬಿ.ಶಂಶುದ್ಧೀನ್ ಅವರ ಮನೆ ಹಾನಿಯಾಗಿರುವ ಸುದ್ದಿ ತಿಳಿದು ತಾನು ಪ್ರತಿನಿಧಿಸುವ ಎಸ್.ಡಿ.ಪಿ.ಐ ಪಕ್ಷದ ಮುಖಂಡ ಅಮೀನ್ ಮೋಸಿನ್ ಸ್ಥಳಕ್ಕೆ ಆಗಮಿಸಿ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ಇವರಿಗೆ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾಡಳಿತದೊಂದಿಗೆ ಮಾತುಕತೆ ಮಾಡುವುದಾಗಿ ತಿಳಿಸಿದರು.