fbpx

ಗ್ರಾಮ ಒನ್ ಸೇವಾ ಕೇಂದ್ರಗಳ ಮೂಲಕ ಡಿಜಿಟಲ್ ಹೆಲ್ತ್ ರೆಕಾರ್ಡ್ ರೂಪಿಸಿಕೊಳ್ಳಲು ಅವಕಾಶ

ಮಡಿಕೇರಿ ಸೆ.07:-ಎಬಿಹೆಚ್‍ಎ ಕಾರ್ಡ್ (Ayushman Bharath Health Account) ಯೋಜನೆಯನ್ವಯ ಭಾರತೀಯರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಂಗ್ರಹಿಸಲು ಅವಕಾಶ ಸಿಗಲಿದೆ. ಈ ಯೋಜನೆಯನ್ವಯ ಎಲ್ಲಾ ಭಾರತೀಯರು 14 ಅಂಕಿಗಳ ವಿಶಿಷ್ಷ ಆರೋಗ್ಯ ಗುರುತಿನ ಸಂಖ್ಯೆಯನ್ನು ಪಡೆಯಲಿದ್ದಾರೆ.

ಈ ವೈಯುಕ್ತಿಕ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ವ್ಯೆದ್ಯರು ಮತ್ತು ವ್ಯೆದ್ಯಕೀಯ ಸೇವಾ ಸಂಸ್ಥೆಗಳು ಹಿಂದಿನ ಚಿಕಿತ್ಸಾ ವಿವರಗಳನ್ನು ಪರಿಶೀಲಿಸಬಹುದು. ಎಬಿಹೆಚ್‍ಎ ಕಾರ್ಡ್ ನ್ನು ನಾಗರೀಕರು ಯಾವುದೇ ವೆಚ್ಚವಿಲ್ಲದೇ, ಆಧಾರ್ ಕಾರ್ಡ್ ಮೊಬ್ಯೆಲ್ ಸಂಖ್ಯೆಯನ್ನು ಆಧರಿಸಿ ಡಿಜಿಟಲ್ ಹೆಲ್ತ್ ರೆಕಾರ್ಡ್/ ಅಭಾ ಕಾರ್ಡ್ ಸಂಖ್ಯೆಯನ್ನು ರೂಪಿಸಿಕೊಳ್ಳಬಹುದಾಗಿದೆ.

ಆದ್ದರಿಂದ ಈ ಯೋಜನೆಯ ಅವಶ್ಯಕತೆಯನ್ನು ಪಡೆದುಕೊಳ್ಳುವ ಕುರಿತು ಸಾರ್ವಜನಿಕರು ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರಗಳ ಮೂಲಕ ಸದುಪಯೋಗ ಪಡೆಯುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೆಂಕಟೇಶ್ ಅವರು ಕೋರಿದ್ದಾರೆ.

error: Content is protected !!