ಗ್ರಾಮೀಣ ಸೊಗಡು ಸಾರುವ ಸಾಂಪ್ರದಾಯಿಕ ಪೊಲಿಂಕಾನ ಉತ್ಸವ ಭಾಗಮಂಡದಲ್ಲಿ ಸರಳ ಆಚರಣೆ!

ಚಿತ್ರ ವರದಿ:ಕುಯ್ಯಮುಡಿ ಸುನಿಲ್.
ಭಾಗಮಂಡಲ ಕ್ಷೇತ್ರದಲ್ಲಿ ಸರಳ ಪೊಲಿಂಕಾನ ಉತ್ಸವ ಆಚರಿಸಲಾಯಿತು. ಮಳೆಯ ಪ್ರಭಾವದಿಂದ ಕಾವೇರಿತಾಯಿ ಶಾಂತವಾಗಿ ಹರಿಯಲ್ಲಿ ಎನ್ನುವ ಕಾರಣಕ್ಕೆ ಸಮಧಾನ ಮಾಡುವ ನಿಟ್ಟಿನಲ್ಲಿ ಬಾಳೆದಿಂಡಿನ ಮಂಟಪದಲ್ಲಿ ಮುತೈದೆಗೆ ನೀಡುವ ಪ್ರತಿಯೊಂದು ವಸ್ತ್ರ,ಕರಿಮಣಿ,ಬಿಚ್ಚೋಲೆಗಳನ್ನು ಬೆಳ್ಳಿ ತಟೊಟೆಯಲ್ಲಿಟ್ಟು ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ತ್ರಿವೇಣಿ ಸಂಗಮದಲ್ಲಿ ಹಿಂದಿನಿಂದಲೂ ಬಿಡುವ ವಾಡಿಕೆಯಿದ್ದು ಕೋವಿಡ್ ಹಿನ್ನಲೆಯಲ್ಲಿ ದೇವಾಲಯದ ಸಮಿತಿ ಸದಸ್ಯರಷ್ಟೆ ಜೊತೆಗೂಡಿ ಆಚರಿಸಿದರು.
ಜಾನಪದ ಇತಿಹಾಸ : ಭಾಗಮಂಡಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಚೊಚ್ಚಲ ಹೆರಿಗೆಗೆ ತೆರಳುವ ಸಂದರ್ಭ ನದಿಯಲ್ಲಿ ಪ್ರವಾಹ ಕಂಡು,ಕಾವೇರಿಗೆ ಶಾಂತವಾಗುವಂತೆ ಬಾಗಿನ ಅರ್ಪಿಸಲಾಗುವ ಸಂಪ್ರದಾಯ ಬಂದಿದ್ದು ಅದುಶಿಂದಿಗೂ ಉತ್ಸವದ ರೀತಿಯಲ್ಲಿ ನಡೆದುಕೊಂಡು ಬಂದಿದೆ,ಇನ್ನೊಂದು ಮೂಲದ ಪ್ರಕಾರ ನದಿಯ ಮತ್ತೊಂದು ದಡದಲ್ಲಿದ್ದ ಕಿತ್ತಳೆ ಹಣ್ಣನ್ನು ತಿನ್ನುವ ಬಯಕೆಯಾಗಿ ಬಸುರಿ ಮಹಿಳೆ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆ ಮಾಡಲು ಕಾವೇರಿಗೆ ಹರಿಕೆ ಹೊತ್ತು ಕೊಂಡಿದ್ದರು ಎನ್ನುವ ಕಥೆ ಚಾಲ್ತಿಯಲ್ಲಿದೆ.