fbpx

ಗೌಡ ಜನಾಂಗಲ್ಲಿ ನಾಟಿ ಕೂಡ್ಸ್ ಕಾಕನ ಹೇಳ್ ವ ಹೊಯ್ಯ ಪದ..

✍🏻ಉಳುವಾರನ ರೋಶನ್ ವಸಂತ್,

ನಮ್ಮ ಗೌಡ ಜನಾಂಗಲ್ಲಿ ನಾಟಿ ಕೂಡ್ಸ್ ಕಾಕನ ಹೇಳ್ವ ಹೊಯ್ಯ ಪದ ತುಂಬಾ ಲಾಯಿಕ್ಕಾಗಿ ,ಅರ್ಥಪೂರ್ಣ ಅಗಿ ಉಟ್ಟು. ಪಂಡ್ ಕಾಲಲ್ಲಿ ನಮ್ಮ ಹಿರಿಯವು ತುಂಬಾ ಗದ್ದೆ ಕೆಲ್ಸ ಮಾಡ್ತಿದ್ದೊ ಅಗ ಗದ್ದೆಗಳ್ಲಿ ಹೊಯ್ಯ ಹಾಕಂಡ್ ನಾಟಿ ನಡ್ದುತ ಹೇಳ್ರೆ ಒಂದು ತರ ಗೌಜಿತ ನಮ್ಮ ಹಿರಿಯವು ಹೇಳಿವೆ. ಕಾಲ ಬದ್ಲದಂಗೆ ಕೃಷಿ ಕೆಲ್ಸ ಅದರ್ ಲೂ ಭತ್ತದ ನಾಟಿ ಕೆಲ್ಸ ಮಾಡವು ದಿನಂದ ದಿನಕ್ಕೆ ಕಮ್ಮಿ ಅಗ್ತೊಳ್ಳೊ.

ಇಂದ್ನ ದಿನಗಳ್ಲಿ ನಾಟಿ ಕೆಲ್ಸತ ಹೇಳ್ರೆ ಯಾರಿಗೂ ಬೇಡತ ಹೇಳುವ ಪರಿಸ್ಥಿತಿ ಬಂದುಟ್ಟು ಹಿಂಗೆ ಅದರೆ ಮುಂದೆನ ದಿನಗಳ್ಲಿ ಜೀವನ ಹೆಂಗೆ ಅದುತ ಹೇಳ್ದರ ಕುರ್ತ ಚಿಂತನೆ ಮಾಡುವ ಅವಶ್ಯಕತೆನು ಉಟ್ಟು. ನಂಗೆ ಹಿರಿಯವು ಹೇಳಿ ಕೊಟ್ಟ ಪ್ರಕಾರ ಹೊಯ್ಯ ಪದನ ನಿಮ್ಮಿಗೂ ತಿಳ್ಸಿಕೊಡುವ ಒಂದು ಸಣ್ಣ ಪ್ರಯತ್ನನ ಮಾಡಿಯೊಳ್ಳೆ .ಓ – ಹೊಯ್ಯಾ ಓ ….ಹೋ ಹೊಯ್ಯ //
ಕಡ್ಕೆ-ಲಿ ಮಡ್ಗಿ – ಕಟ್ಟಿದಾ ಭತ್ತ
ಕೆಂಬೆತ್ತ್ ಓಲಾಡಿ – ಬೆಳ್ದಾ ಭತ್ತ- ಓ…. ಹೊಯ್ಯಾ ಓ.. ಹೋ.. ಹೊಯ್ಯಾ //
ಚಿನ್ನಾದ ಕತ್ತಿಲಿ – ಕೊಯ್ದಂತಾ ಬೆಳೆನಾ
ರನ್ನಾದ ಹಗ್ಗ ಲಿ – ಹೊರೆಕಟ್ಟಿ ತಂದ್ //
ನಾರಾಯಣ ಶಿವತೇಳುವ ಎರಡೆತ್ತ್ ಲಿ
ಹೂಡ್ದಂತ ಗದ್ದೆ ಲಿ ಬೆಳ್ದಾ ಅಗೆನಾ ಓ.. ಹೊಯ್ಯಾ ಓ… ಹೊ… ಹೊಯ್ಯಾ
ಕಳಿ ಕಳಿ ನಾಟಿ ಕಾವೇರಮ್ಮಂಗೆ / ಕಳಿ ಕಳಿ ನಾಟಿ ಇಗ್ಗುತ್ತಪ್ಪಂಗೆ /
ಕಾವೇರಮ್ಮನ ಮನ್ಸ್ ನಂಗೆ / ಇಗ್ಗುತ್ತಪ್ಪನ ಬೆಟ್ಟದ ಹಂಗೆ /
ಏರಿಗೂ ಬಾರಿಗೂ ಮುಟ್ಟಿಕಂಡ್ ಬೆಳಿಯಲ್ಲಿ /
ಬೆಳ್ದಂತ ಭತ್ತ – ಸಮಾಪಾಲ್ ಓ…ಹೊಯ್ಯಾ …ಓ …ಹೊ… ಹೊಯ್ಯಾ //
ನಂಗೂ ದೇವ್ರಿಗೂ ಸಮಪಾಲ್
ನಂಗೂ ದೇವ್ರಿಗೂ ಸಮಪಾಲ್ ಓ… ಹೊಯ್ಯಾ …ಓ … ಹೊ… ಹೊಯ್ಯಾ //

✍🏻ಉಳುವಾರನ ರೋಶನ್ ವಸಂತ್

error: Content is protected !!