ಗೋವು ಹಂತಕರು ಅಂದರ್!

ಕೊಡಗು: ಎರಡು ದಿನಗಳ ಹಿಂದೆಯಷ್ಟೆ ಮನೆಯಲ್ಲಿ ಕಟ್ಟಿದ್ದ ಗಿರ್ ತಳಿಯ ಗಬ್ಬದ ಹಸುವನ್ನು ಕಳತನ ಮಾಡಿ ಹತ್ಯೆ ಮಾಡಿ ಮಾಂಸ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಹಸುವಿನ ಮಾಲೀಕ ಕೃಷಿಕ ಸೇವ್ಯರ್ ಸಿದ್ಧಾಪುರದ ಪೋಲಿಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನ ಹಿನ್ನಲೆಯಲ್ಲಿ ನಾಲ್ವರು ಆರೋಪಿಗಳನ್ನು ಸಿದ್ಧಾಪುರ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಕಲ್ಲಳ್ಳ ಮಾಲ್ದಾರೆ ನಿವಾಸಿಗಳಾದ ಹಂಸ ಮತ್ತು ಶಕೀರ್ (ತಂದೆ ಮಗ) ಹಾಗು ಬಾಡಗ ಬಾಣಂಗಾಲದ ನಾಸಿರ್ ಮತ್ತು ಆಶೀಷ್ ನನ್ನು ಬಂಧಿಸಿದ್ದು,ಕೃತ್ಯಕ್ಕೆ ಬಳಸಿದ ಆಯುಧಗಳು,ತಕ್ಕಡಿ ಸೇರಿದಂತೆ ಇತರೆ ವಸ್ತುಗಳನ್ನು ಪಿಕಪ್ ಜೀಪು,ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು,ಮಾಂಸವನ್ನು ಪೊಟ್ಟಣದಲ್ಲಿ ಕಟ್ಟಿ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ .ಸಿದ್ಧಾಪುರದ ಯುವ ಕೇಸರಿ ಪಡೆಯ ಮುಖಂಡ ಪ್ರವೀಣ್ ನೇತೃತ್ವದಲ್ಲಿ ನಡೆದ ಅಭಿಯಾನಕ್ಕೆ ಶಾಸಕರು ಸೇರಿದಂತೆ ಜಿಲ್ಲಾದ್ಯಂತ ಬೆಂಬಲ ವ್ಯಕ್ತವಾಗಿದ್ದ ಪರಿಣಾಮದ ಪರಿಣಾಮ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.

error: Content is protected !!