ಗೋವು ಮಾಂಸ ಭಕ್ಷಣೆ ಆರೋಪ:ಸಿದ್ಧರಾಮಯ್ಯ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ

ಕೊಡಗು: ಮಾಜಿ ಮುಖ್ಯ ಮಂತ್ರಿ ಹಾಗು ವಿಪಕ್ಷದ ನಾಯಕ ಸಿದ್ದರಾಮ್ಯ ಮುಸ್ಲಿಂ, ಕ್ರೈಸ್ತರಂತೆ ಕೊಡವರು ಗೋವು ಮಾಂಸ ಸೇವನೆ ಮಾಡುತ್ತಾರೆ ಎಂದು ನೀಡಿರುವ ಹೇಳಿಕೆಗೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗೋವು ಹತ್ಯೆ ಮಸೂದೆ ಕುರಿತ ಮಾತನಾಡುತ್ತಾ ಮುಸ್ಲಿ‌ಮರು,ದಲಿತರು,ಕ್ರೈಸ್ತರು ಒಳಗೊಂಡಂತೆ ಕೊಡವರು ಸಹ ಬೀಫ್ ತಿನ್ನುತ್ತಾರೆ ಎಂದು ನಾಲಿಗೆ ಹರಿಬಿಟ್ಟ ಕಾರಣಕ್ಕೆ ಗೋವನ್ನು ದೈವಿ ಭಕ್ತಿಯಿಂದ ಕಾಣುವವರಾದ ನಮ್ಮ ಸ್ವಾಭಿಮಾಕ್ಕೆ ದಕ್ಕೆ ತರುವಂತೆ ಮಾಡಿದ್ದಾರೆ. ಹೇಳಿಕೆಯನ್ನು ಹಿಂಪಡೆದು,ಕೊಡವರ ಕ್ಷೆಮೆಯಾಚಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಅಪಸ್ವರ ಹೊರ ಹಾಕಿದರೆ, ಸಾರ್ವಜನಿಕ ವಲಯದಲ್ಲೂ ಆಕ್ರೋಶ ಭುಗಿಲೆದ್ದಿದೆ. ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಛೇರಿ ಎದುರು,ಬಿಜೆಪಿ ಪ್ರತಿಭಟನೆಗೆ ಮುಂದಾಗಿದ್ದು ಕೊಡವ ಸಮಾಜ ವತಿಯಿಂದ ಭಹಿರಂಗ ಕ್ಷೆಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಳಿಕ ಹೇಳಿಕೆ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು…

error: Content is protected !!