fbpx

ಗೋವುಗಳ ಮಾರಣ ಹೋಮ: ಮೂವರ ಬಂಧನ

ವರದಿ: ಗಿರಿಧರ್ ಕೊಂಪುಳಿರ

ಕೊಡಗು: ಜೀವನದಿ ಕಾವೇರಿ ತವರೂರು ಕೊಡಗಿನಲ್ಲಿ ಗೋವುಗಳ ಮಾರಣ ಹೋಮ ನಡೆದಿದೆ.ನಿಷೇಧಿತ ಕಾಫಿ ತೋಟದ ಒಳಗೆ ಪ್ರವೇಶ ಮಾಡಿದೆ ಎನ್ನುವ ಕಾರಣಕ್ಕೆ ಬಾಳೆಹಣ್ಣಿಗೆ ವಿಷ ಬೆರೆಸಿ ಹಸುವಿಗೆ ವಿಷ ಪ್ರಾಶನ ಮಾಡಿ 20ಕ್ಕೂ ಹೆಚ್ಚು ಹಸುಗಳ ಮಾರಣ ಹೋಮ ನಡೆದದ್ದು ಸೋಮವಾರಪೇಟೆ ತಾಲ್ಲೂಕಿನ ಐಗೂರುವಿನ ಕೋವರ್ ಕೊಲ್ಲಿ ಟಾಟಾ ಎಷ್ಟೇಟ್ ನಲ್ಲಿ.

ಕಳೆದ ಮೂರು ದಿನಗಳಿಂದ ಜಾನುವಾರುಗಳು ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಅವುಗಳ ಮಾಲೀಕರು ಹುಡುಕಾಟ ನಡೆಸುತ್ತಿದ್ದ ವೇಳೆ ಕೊಳೆತ ವಾಸನೆ ಎಸ್ಟೇಟ್ ಒಳಗಿನಿಂದ ಬರುತ್ತಿದ್ದ ವೇಳೆ ಸಾರ್ವಜನಿಕರ ನಿಷೇಧ ಇರುವ ತೋಟಕ್ಕೆ ಜಾನುವಾರುಗಳ ಮಾಲೀಕರು ಲಗ್ಗೆ ಇಟ್ಟಿದ್ದು ಅರೆಬರೆ ಮಣ್ಣಿನಲ್ಲಿ ಹೂತಿರುವುದು ಕಂಡು ಬಂದಿದೆ.

ಅದಲ್ಲದೆ ಹಸುಗಳನ್ನು ಅಮಾನವೀಯವಾಗಿ ಟ್ರಾಕ್ಟರ್ ನಲ್ಲಿ ತೆಗೆದುಕೊಂಡು ಹೂತು ಹಾಕಲಾಗಿದ್ದು ಕಂಡು ಎಸ್ಟೇಟ್ ಮ್ಯಾನೆಜರ್ ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮ್ಯಾನೆಜರ್, ಮತ್ತೊಬ್ಬ ಸಿಬ್ಬಂದಿ ಮತ್ತು ಟ್ರಾಕ್ಟರ್ ಚಾಲಕ ಹಾಗು ಟ್ರಾಕ್ಟರ್ ಅನ್ನು ಸೋಮವಾರಪೇಟೆ ಪೋಲಿಸರು ವಶಕ್ಕೆ ಪಡೆದಿದ್ದಾರೆ.

error: Content is protected !!