ಗೋವಿಗೆ ಗುಂಡಿಕ್ಕಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಕೇಸರಿ ಯೂತ್ ಮೂವ್ ಮೆಂಟ್ ಒತ್ತಾಯ

ಸಿದ್ಧಾಪುರ -: ಮಡಿಕೇರಿಯ ಕಗ್ಗೋಡ್ಲುವಿನಲ್ಲಿ ದುಷ್ಟರು ಅಮಾನವೀಯ ರೀತಿಯಲ್ಲಿ ಮಾಂಸಕ್ಕಾಗಿ ಗೋವನ್ನು ಗುಂಡಿಕ್ಕಿ ಕೊಂದು, ನಂತರ ಹಿಂದೂ ಸಂಘಟನೆ ಕಾರ್ಯಕರ್ತನ ಎದೆಗೆ ಕೋವಿ ಇಟ್ಟ ಘಟನೆಯನ್ನು ಕೇಸರಿ ಯೂತ್ ಮೂವ್ ಮೆಂಟ್ ಸಂಘಟನೆಯು ತೀವ್ರವಾಗಿ ಖಂಡಿಸುತ್ತಿದ್ದು, ಇದರ ಹಿಂದಿರುವ ಸಮಾಜಘಾತುಕ ದುಷ್ಟರನ್ನು ಕೂಡಲೇ ಬಂಧಿಸಿ ತಕ್ಕ ಶಿಕ್ಷೆಯನ್ನು ನೀಡುವಂತೆ ಒತ್ತಾಯಿಸಿದೆ.
ಕೊಡಗು ಜಿಲ್ಲೆಯಾದ್ಯಂತ ಲಾಕ್ ಡೌನ್ ಸಂಧರ್ಭದಲ್ಲಿ ಗೋವುಗಳ ಮಾರಣಹೋಮ ನಡೆಯುತ್ತಿದ್ದರೂ ಪೋಲಿಸ್ ಇಲಾಖೆಯು ಮಾತ್ರ ಕಣ್ಣು ಮುಚ್ಚಿ ಕುಳಿತ್ತಿದ್ದು, ಕಾವೇರಿಮಾತೆಯ ಮಣ್ಣಿನಲ್ಲಿ ನಿರಂತರವಾಗಿ ಗೋಹತ್ಯೆ ನಡೆಸುತ್ತಿರುವ ಗೋಹಂತಕರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲೆಂದೇ ಈ ರೀತಿಯಲ್ಲಿ ಮಾಡುತ್ತಿರುವುದು ಅಲ್ಲದೆ, ತಾವು ಸಾಕಿದ ಗೋವುಗಳನ್ನು ಕದ್ದು ಸಾಗಿಸುವ ದುರುಳರಿಂದ ರಕ್ಷಣೆ ಮಾಡೋಕೆ ಸಾಧ್ಯವಿಲ್ಲದೆ ರೈತಾಪಿ ವರ್ಗ ಕೂಡಾ ಇಂತಹ ಘಟನೆಗಳ ಮೂಲಕ ಕಂಗಾಲಾಗಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಪಾಲಿಬೆಟ್ಟದಲ್ಲಿ ಗಬ್ಬದ ಹಸುವನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಾಗ, ಕಕ್ಕಬೆ ಭಗವತಿ ದೇವಾಲಯದ ಕಮಾನಿಗೆ ಗೋವಿನ ಕಾಲುಗಳನ್ನು ನೇತುಹಾಕುವುದರ ಮೂಲಕ ಹಿಂದೂಗಳನ್ನು ಕೆಣಕಿದಾಗ, ಕಳೆದ ಕೆಲವು ದಿನಗಳ ಹಿಂದೆ ಮಾಲ್ದಾರೆಯ ಮಠ ಎಂಬಲ್ಲಿ ಗಿರ್ ತಳಿಯ ಗಬ್ಬದ ಗೋವನ್ನು ಕದ್ದು ಮಾಂಸ ಮಾಡಿದಾಗ ಪೋಲಿಸ್ ಇಲಾಖೆಯು ಸಮರ್ಪಕವಾದ ಸೆಕ್ಷನ್ ಗಳನ್ನು ಹಾಕಿ ಜೈಲಿಗೆ ಅಟ್ಟಿದರೆ ನಿನ್ನೆಯ ರೀತಿಯ ಘಟನೆಗಳು ಮರುಕಳಿಸುತ್ತಿರಲಿಲ್ಲ.
ಲಾಕ್ ಡೌನ್ ಸಂಧರ್ಭದಲ್ಲಿ ಇಷ್ಟೊಂದು ಪೋಲಿಸ್ ಬಿಗಿಭದ್ರತೆ ಇದ್ದರೂ ಕೂಡಾ ತಂಡವಾಗಿ ಕೋವಿ ತಗೊಂಡು ವಾಹನದಲ್ಲಿ ಬರುವುದಾದರು ಹೇಗೆ, ಗೋವುಗಳನ್ನು ಮಾಂಸಮಾಡಿ ತಗೊಂಡು ಹೋಗುವುದಾದರು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಇದು ಲಾಕ್ ಡೌನ್ ಸಮಯದಲ್ಲಿನ ಇಲಾಖೆಯ ವಿಫಲತೆಯನ್ನು ತೋರಿಸುತ್ತದೆ.
ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ನಡೆದರೆ ಆಗುವ ಅನಾಹುತಗಳಿಗೆ ಇಲಾಖೆಯೇ ನೇರ ಹೊಣೆಯಾಗಿದ್ದು, ಗೋಸಂರಕ್ಷಣೆಯ ವಿಷಯದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡುವುದಕ್ಕೆ ಕೇಸರಿ ಪಡೆ ಸಜ್ಜಾಗಿದ್ದು, ಗೋರಕ್ಷಣೆಯ ಹೋರಾಟಕ್ಕೆ ಜಿಲ್ಲೆಯ ವಿವಿಧ ಭಾಗಗಳಲ್ಲಿನ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ನಾವು ಸಾಥ್ ನೀಡಲಿದ್ದು, ಕೊಡಗಿನಲ್ಲಿ ನಿರಂತರ ನಡೆಯುವ ಗೋಹತ್ಯೆಗೆ ಸಂಬಂಧಿಸಿದಂತೆ ಕೊಡಗಿನ ವಿವಿಧ ಮಠಾಧೀಶರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗುವುದು ಎಂದು
ಕೇಸರಿ ಯೂತ್ ಮೂವ್ ಮೆಂಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.