ಗೋವನ್ನು ರಕ್ಷಿಸಿದ ಕೇಸರಿ ಪಡೆ

ಕೊಡಗು: ಚೆಟ್ಟಳ್ಳಿ ಬಳಿಯಲ್ಲಿ ಕಾಡುಪ್ರಾಣಿ ತಡೆಗೆ ಇಡಲಾಗಿದ್ದ ತಂತಿಯ ಉರುಳಿಗೆ ಸಿಲುಕಿ ನರಳಾಡುತ್ತಿದ್ದ ಗೋವನ್ನು ರಕ್ಷಿಸಿ ಚಿಕಿತ್ಸೆ ನೀಡುವಲ್ಲಿ ಗೋವುರಕ್ಷಕರು ಯಶಸ್ವಿಯಾಗಿದ್ದಾರೆ.

ಕಳೆದ ಐದಾರು ದಿನಗಳಿಂದ ಉರುಳಿಗೆ ಸಿಲುಕಿ, ಆಹಾರ ನೀರಿಲ್ಲದೆ ನರಳುತ್ತಿದ್ದ ಗೋವು ಬಿಡಿಸಿಕೊಳ್ಳಲು ಯತ್ನಿಸಿ ತಂತಿಯಿಂದ ಬಿಗಿಗೊಂಡು, ಕಾಲು ಮುರಿತದಿಂದ ನರಕಯಾತನೆ ಅನುಭವಿಸಿತ್ತು. ಇದನ್ನು ಗಮನಿಸಿದ ಕೆಲವರು ಅಮ್ಮತ್ತಿಯ ಕಾಮಧೇನು ಗೋ ಶಾಲೆಯ ರಾಮಚಂದ್ರಭಟ್ಟ್ ರವರ ಗಮನಕ್ಕೆ ತಂದು, ರಕ್ಷಣೆ ಮಾಡಿ ಪಶುವೈದ್ಯರನ್ನು ಕರೆದುಕೊಂಡು ಹೋಗಲಾಗಿದ್ದು ಕಾಲಲ್ಲಿ ಹುಳ ಬಂದಿದ್ದು ಕಂಡು, ವೈದ್ಯರು ಇದಕ್ಕೆ ಆಪರೇಷನ್ ಮಾಡಬೇಕು, ಗ್ಯಾಂಗ್ರೀನ್ ಆಗಿ ಇದು ಸತ್ತುಹೋಗಬಹುದು, ಆಪರೇಷನ್ ಗೆ ಸೌಕರ್ಯ ಇಲ್ಲಿ ಇಲ್ಲ, ಚುಚ್ಚುಮದ್ದು ನೀಡಿ ಸಾಯಿಸುವುದ ಒಳಿತು ಎಂದು ಹೇಳಿದ ತಕ್ಷಣ ಅದನ್ನು ಬದುಕಿಸುವ ಛಲದೊಂದಿಗೆ ರಾಮಚಂದ್ರ ಭಟ್ ಮತ್ತು ಗುರುರಾಜ್ ಭಟ್ ರವರು, ಸಿದ್ಧಾಪುರದ ಕೇಸರಿ ಯೂತ್ ಮೂವ್ ಕಾರ್ಯಕರ್ತರ ಬಳಿ ವಿಷಯ ತಿಳಿಸಿ, ಅಮ್ಮತ್ತಿ ಗೋಶಾಲೆಗೆ ಈ ಗೋವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

error: Content is protected !!