ಗೋಮಾಂಸ ಮಾರಟ: ಓರ್ವ ಬಂಧನ

ಕೊಡಗು:ಹುಣಸೂರು ಹೊರವಲಯದಿಂದ ಗೋ ಮಾಂಸವನ್ನು ತಂದು ಮನೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿರಾಜಪೇಟೆ ಪೋಲಿಸರು ಬಂಧಿಸಿದ್ದಾರೆ.
ಇಲ್ಲಿನ ಸುಣ್ಣದ ಬೀದಿಯಲ್ಲಿನ ಮನೆಯಲ್ಲಿ ಇದ್ರಿಸ್ ಎಂಬಾತ ಪ್ರತಿನಿತ್ಯ ಸಂಬಂಧಿಕರು ಮತ್ತು ಅಕ್ಕಪಕ್ಕದವರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೋಲಿಸರು ,ಮನೆಯ ಕೋಣೆಯೊಂದರಲ್ಲಿ ಚೀಲದಲ್ಲಿ ಇರಿಸಿದ್ದ ರೂ 3900 ಮೌಲ್ಯದ 13 ಕೆಜಿ ಗೋ ಮಾಂಸ ಮತ್ತು ಮಾರಾಟ ಮಾಡಿದ 990 ರುಪಾಯಿ ಹಣವನ್ನು ವಶಕ್ಕೆ ಪಡೆದು,ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.