ಗೋಣಿಕೊಪ್ಪದಲ್ಲಿ ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆ

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಮೀನು,ಕೋಳಿ,ಹೊಳೆ ಮೀನು,ಕುರಿ,ಹಂದಿ ಮಾಂಸ ಮಾರುಕಟ್ಟೆ ಹರಾಜು ಪ್ರಕ್ರಿಯೆ ನಡೆದಿದ್ದು ಗೋಣಿಕೊಪ್ಪಲು ಹಸಿಮೀನು ಮಾರುಕಟ್ಟೆಯ ಮೂರು ಮಳಿಗೆ ಸೇರಿ ರೂ. 8,51,000 ಹರಾಜು ಪ್ರಕ್ರಿಯೆಯಲ್ಲಿ ಉಂಬಯಿ ಅವರ ಪಾಲಾಗಿದೆ.

ಉಳಿದ ಹರಾಜು ಪ್ರಕ್ರಿಯೆಗೆ ಕನಿಷ್ಟ ಬಿಡ್ಡುದಾರರ ಸಂಖ್ಯೆ ಮೂರು ಇರಬೇಕಿದ್ದು ತಲಾ ಒಬ್ಬರೇ ಬಿಡ್ಡು ಹಣ ಸಲ್ಲಿಸಿರುವ ಹಿನ್ನೆಲೆ ಪ್ರಕ್ರಿಯೆ ಮುಂದೂಡಲಾಗಿದೆ.

error: Content is protected !!