ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ರಾಷ್ಟ್ರೀಯ ಹಾಕಿ ಪಟು

ರಾಷ್ಟ್ರೀಯ ಹಾಕಿಪಟು ಹಾಗು ಐ.ಓ.ಸಿ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಜಪೇಟೆಯ ಮೂಲದ ಎಸ್.ಎಂ ರಫೀಕ್ ಕುಶಾಲನಗರದ ಬಳಿಯ ಬೈಲಕುಪ್ಪೆಯ ಎಸ್ ಎಲ್ ವಿ ಕಲ್ಯಾಣ ಮಂಟಪ ದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಾಕಿಪಟುಗಳು ಸಾಕ್ಷಿಯಾದರು.

ಇಲ್ಲಿನ ಜಾಮಿಯಾ ಮಸೀದಿಯಲ್ಲಿ ರಫೀಕ್ ಗುಲ್ಜಾರ್ ಬಾನು ಎಂಬುವರ ಜೊತೆ ನಿಖಾ ನಡೆದಿದ್ದು ಒಲಂಪಿಯನ್ ಗಯಾದ ವಿ.ಆರ್ ರಘುನಾಥ್, ಅಂತರರಾಷ್ಟ್ರೀಯ ಹಾಕಿ ಪಟುಗಳಾದ ಸೋಮಣ್ಣ, ವಿಕ್ರಾಂತ್, ನಿಕಿನ್ ತಿಮ್ಮಯ್ಯ, ಎಂ.ಬಿ ಅಯ್ಯಪ್ಪ, ರಾಷ್ಟ್ರೀಯ ಆಟಗಾರರಾದ ಅಪ್ಪಣ್ಣ, ಚಿಂಗಪ್ಪ, ದರ್ಶನ್ ಸೇರಿದಂತೆ ಹಲವರು ಭಾಗಿಯಾಗಿ ವಧು ವರರಿಗೆ ಆಶೀರ್ವದಿಸಿದರು.