ಗೂಡ್ಸ್ ವಾಹನಕ್ಕೆ ಸಿಲುಕಿ ವ್ಯಕ್ತಿ ಸಾವು

ಕೊಡಗು:ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಗೂಡ್ಸ್ ವಾಹನಕ್ಕೆ ಸಿಲುಕಿ ಮೃತಪಟ್ಟ ಘಟನೆ ಕುಶಾಲನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಗ್ರಾಮಾಂತರ ಪೋಲಿಸ್ ಠಾಣೆ ಪಕ್ಕದಲ್ಲೇ ನಡೆದಿದೆ.ಮೂಲತಃ ಪಿರಿಯಾಪಟ್ಟಣದ ದಿನಗಾಡು ಗ್ರಾಮದ ವಸಂತ 30 ಮೃತ ವ್ಯಕ್ತಿ.ಕೈಗಾರಿಕೆ ಬಡಾವಣೆಯಲ್ಲಿ ಕೂಲಿ ಮಾಡಿಕೊಂಡಿದ್ದ ವಸಂತ್ ಇಲ್ಲಿಗೆ ಸಮೀಪದ ಬಾರ್ ನಲ್ಲಿ ಕಂಠಪೂರ್ತಿ ಕುಡಿದು ನಿಂತಿದ್ದ ಗೂಡ್ಸ್ ವಾಹನದಡಿ ಮಲಗಿಕೊಂಡಿದ್ದು,ವಾಹನ ಚಾಲಕ ತನಗೆ ಅರಿವಿಲ್ಲದೆ ವಾಹನ ಚಲಾಯಿಸಿದ ಸಂದರ್ಭ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. ಕುಡಿದ ಅಮಲಿನಲ್ಲಿದ್ದ ವಸಂತ್ ನನ್ನು ಖ್ಯಾರೇ ಅನ್ನದೆ ತೆರಳಿದ್ದು,ಗಾಯಗೊಂಡಿದ್ದ ವಸಂತ ಪಕ್ಕದ ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುವುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.