ಗುತ್ತಿಗೆದಾರನ ವಿರುದ್ಧ ಶಾಸಕ ರಂಜನ್ ದೂರು

ಕೊಡಗಿನ ಜಿಲ್ಲಾಕೇಂದ್ರ ಮಡಿಕೇರಿಯಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಸೇರಿದ್ದ ತಡೆಗೋಡೆ ಇತ್ತೀಚೆಗಿನ ಮಳೆಗೆ ಕುಸಿದ ಪರಿಣಾಮ, ಏಳು ಕೋಟಿ ವೆಚ್ಚದ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಕಾಮಗಾರಿಯ ಗುತ್ತಿಗೆ ದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದು.
ಮತ್ತು ಸಂಬಂದಪಟ್ಟ ಎಂಜಿನಿಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಲೋಕೋಪಯೋಗಿ ಕಾರ್ಯದರ್ಶಿ ರವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಲಿಖಿತ ದೂರು ನೀಡಿದ್ದಾರೆ.