ಗುಜರಾತ್ ಹತ್ಯಾಕಾಂಡದ ಸಿನಿಮಾ ಮಾಡಿದ್ರೆ ಸಿದ್ದರಾಮಯ್ಯ ಊರು ಬಿಟ್ಟು ಓಡಬೇಕಾಗುತ್ತದೆ: ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ಗುಜರಾತ್ ಹತ್ಯಾಕಾಂಡದ ಸಿನಿಮಾ ಮಾಡಿದ್ರೆ ಸಿದ್ದರಾಮಯ್ಯ ಊರು ಬಿಟ್ಟು ಓಡಬೇಕಾಗುತ್ತದೆ ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಬಂದಿರೋದು ಎಲ್ಲವೂ ಸುಳ್ಳು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.

ಗುಜರಾತ್‍ನಲ್ಲಿ ಮುಸಲ್ಮಾನರು ಮಾಡಿದ ಅತ್ಯಾಚಾರವನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಬೇಕಾದರೆ ಒಂದು ಸಲ ಹೋಗಿ ಬರಲಿ, 56 ಜನರನ್ನು ರೈಲಿನಲ್ಲಿ ಬೆಂಕಿ ಹಾಕಿ ಕೊಂದಿದ್ದರು. ಅವರ ಮನೆಗೆ ಹೋಗಿ ಕುಟುಂಬದ ದುಃಖ ಏನು ಎಂದು ಕೇಳಿದಾಗ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಸ್ತೆ ಮಧ್ಯೆ ದನದ ಮಾಂಸ ತಿನ್ನುತ್ತೇವೆ ಎನ್ನುವ ಸಿದ್ದರಾಮಯ್ಯ ಇವತ್ತು ಬದುಕಿರುವುದು ಅವರ ತಾಯಿ ಹಾಗೂ ಹೆಂಡತಿ ಬೆಳಗ್ಗೆಯಿಂದ ರಾತ್ರಿವರೆಗೆ ದೇವರ ಪೂಜೆ ಮಾಡಿರುವುದರಿಂದ ಅನ್ನೋದು ಅವರಿಗೆ ಗೊತ್ತಿರಲಿ.

ಸಿದ್ದರಾಮಯ್ಯನವರ ಮನೆಯಲ್ಲಿ ಪೂಜೆ ಮಾಡುತ್ತಾರೆ ಎಂದು ಅವರ ಹೆಂಡತಿ ಮತ್ತು ತಾಯಿಯನ್ನು ಮನೆಯಿಂದ ಹೊರಗೆ ಹಾಕ್ತಾರ, ಅವರ ಪುಣ್ಯದ ಫಲದಿಂದ ಸಿದ್ದರಾಮಯ್ಯ ಬದುಕಿದ್ದಾರೆ ಅನ್ನೋದು ಅವರಿಗೆ ಗೊತ್ತಿರಬೇಕು. ಹಿಂದೂ ಸಮಾಜವನ್ನು ಹೀಯಾಳಿಸುವ ಕೆಲಸ ಅವರು ಮಾಡಬಾರದು ಎಂದು ಕಿವಿಮಾತು ಹೇಳಿದರು.

error: Content is protected !!