ಗುಂಡೇಟಿಗೆ ಗೋವು ಬಲಿ, ಗೋವುಗಳ್ಳರು ಮಾಂಸ ಬಿಟ್ಟು ಪರಾರಿ!

ಕೊಡಗು: ಇತ್ತೀಚೆಗಷ್ಟೇ ಕಡಗದಾಳುವಿನಲ್ಲಿ ಗೋ ಹತ್ಯೆ ನಡೆಸಿ ಮಾಂಸ ಮಾರಾಟ ಮಾಡಿರ5ವ ಬೆನ್ನಲ್ಲೇ ಮಂಗಳವಾರ ಸಂಜೆ ದುಷ್ಕರ್ಮಿಗಳು ಗುಂಡಿಕ್ಕಿ ಗೋವುವೊಂದನ್ನು ಹತ್ಯೆ ಮಾಡಿ,ಬಳಿಕ ಮಾಂಸವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ವಿಷಯ ತಿಳಿದು ಸ್ದಳಕ್ಕೆ 50 ಕ್ಕೂ ಹೆಚ್ಚು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ದೌಡಾಯಿಸಿದ್ದು
ನಾಲ್ಕು ದಿಕ್ಕುಗಳಿಂದ ಕಾರ್ಯಕರ್ತರು ದುಷ್ಕರ್ಮಿಗಳ ಸೆರೆಗೆ ಬಲೆ ಬೀಸಿದರು,ಬಳಿಕ
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಫೊಲಿಸರು ಸ್ಥಳಕ್ಕೆ ಆಗಮಿಸಿ, ಗೋಮಾಂಸ ಮತ್ತು ಚಾಕು ವಶಪಡಿಸಿಕೊಂಡಿದ್ದಾರೆ.

error: Content is protected !!