ಗ್ರೀನ್ ಸಿಟಿ ಪೊರಂನಿಂದ ಶ್ಲಾಘನೀಯ ಸೇವೆ…!

ಕೊಡಗು:ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ತಡೆಗೆ ನಗರಸಭೆ ಹಲವು ವ್ಯವಸ್ತೆಗಳು ಮಾಡಿರುವ ಬೆನ್ನಲ್ಲೇ ಗ್ರೀನ್ ಸಿಟಿ ಫೋರಂ ಕೈಜೋಡಿಸಿ ಆನೆ ಬಲ ದೊರೆತಂತಾಗಿದೆ.

ಫೋರಂ ವತಿಯಿಂದ ಸೋಂಕಿತ ವ್ಯಕ್ತಿಗಳಿಗೆ ಉಚಿತ ಊಟ, ದಿನಸಿ ತರಕಾರಿ ಸೇರಿದಂತೆ ವೈದಕೀಯ ಸೇವೆಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ನಗರಸಭೆಯ ಅಭಯ ಸೇವಾಕೇಂದ್ರಕ್ಕೆ ಕರೆ ಮಾಡಿದಲ್ಲಿ ಉಚಿತವಾಗಿ ವೈದಕೀಯ ಸೇವೆ ಪಡೆಯಲು ವಾಹನ ವ್ಯವಸ್ಥೆ,ಔಷಧಿ ಸರಬರಾಜು,ಮನೆ ಬಾಗಿಲಿಗೆ ದಿನಸಿ ತರಕಾರಿ,ಅಗತ್ಯಕ್ಕೆ ಅನುಕೂಲಕ್ಕೆ ತಕ್ಕಂತೆ ಸ್ಯಾನಿಟೈಸರ್ ಮಾಸ್ಕ್ ಪೂರೈಕೆ, ಸೋಂಕಿತರಿಗೆ ಮನೆ ಬಾಗಿಲಿಗೆ ಊಟದ ವ್ಯವಸ್ಥೆಯನ್ನು ಒದಗಿಸಲಾಗುವುದು.

ದೂರವಾಣಿ ಸಂಖ್ಯೆ 7795221252, 9620709989, 08271220111 (ಕಂಟ್ರೋಲ್ ರೂಂ) ಸಂಪರ್ಕಿಸಬಹುದು.

error: Content is protected !!