ಗಿನ್ನಿಸ್ ದಾಖಲೆಯತ್ತ ‘ಮುಖ್ಯಮಂತ್ರಿ’!

‘ಮುಖ್ಯಮಂತ್ರಿ’ ನಾಟಕ ಈವರೆಗೆ 735 ಪ್ರದರ್ಶನಗಳನ್ನು ಕಂಡಿದ್ದು, 736 ನೇ ಪ್ರದರ್ಶನ ಏಪ್ರಿಲ್ 18 ರಂದು ಸಂಜೆ 6-30 ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿದೆ.

ಈ ನಾಟಕದ ಮೂಲಕವೇ ಖ್ಯಾತ ನಟ ಚಂದ್ರು ಅವರು ‘ಮುಖ್ಯಮಂತ್ರಿ’ ಚಂದ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ 41 ವರ್ಷ ಒಬ್ಬರೇ ಒಂದು ಪಾತ್ರವನ್ನು ನಿರ್ವಹಿಸಿದ್ದು ಒಂದು ದಾಖಲೆ ಎನಿಸಿದೆ.

ಹೀಗಾಗಿ ಮೈಸೂರಿನಲ್ಲಿ ನಡೆಯುವ 736 ನೇ ಪ್ರದರ್ಶನದ ನಂತರ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಗಿನ್ನಿಸ್ ಸಂಸ್ಥೆಗೆ ಸಲ್ಲಿಸಲು ತೀರ್ಮಾನಿಸಲಾಗಿದೆ.

error: Content is protected !!