ಗಾಸಿಪ್ಪಿಗೆ ಬ್ರೇಕ್ ಹಾಕಿದ ನಟಿಯ ತಾಯಿ!

ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಸದ್ಯದಲ್ಲೇ ನಟಿ ಅನುಪಮಾ ಪರಮೇಶ್ವರನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯಿತ್ತು.

ಈ ಬಗ್ಗೆ ಈಗ ಸ್ವತಃ ಅನುಪಮಾ ತಾಯಿ ಸುನಿತಾ ಸ್ಪಷ್ಟನೆ ನೀಡಿದ್ದಾರೆ. ‘ಆಗಾಗ ಅನುಪಮಾ ಮತ್ತು ಬುಮ್ರಾ ಬಗ್ಗೆ ಗಾಳಿ ಸುದ್ದಿ ಕೇಳಿಬರುತ್ತಿರುತ್ತದೆ. ಇದೆಲ್ಲಾ ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದೇ ನನಗೆ ಅಚ್ಚರಿ. ಸದ್ಯಕ್ಕೆ ಅಂತಹ ಯಾವುದೇ ಪ್ಲ್ಯಾನ್ ಇಲ್ಲ. ಅನುಪಮಾ ಅವಳ ವೃತ್ತಿರಂಗದಲ್ಲಿ ಬ್ಯುಸಿಯಾಗಿದ್ದಾಳೆ. ಬುಮ್ರಾ ಜೊತೆಗೆ ಆಕೆಗೆ ಉತ್ತಮ ಸ್ನೇಹವಿದೆಯಷ್ಟೇ’ ಎಂದು ಸುನಿತಾ ಸ್ಪಷ್ಟನೆ ನೀಡಿದ್ದಾರೆ.

ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಕಾರಣ ನೀಡಿ ಟೀಂ ಇಂಡಿಯಾದಿಂದ ಬ್ರೇಕ್ ತೆಗೆದುಕೊಂಡ ಬೆನ್ನಲ್ಲೇ ಅನುಪಮಾ ಜೊತೆಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಸ್ವತಃ ಅನುಪಮಾ ತಾಯಿಯೇ ಆ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

error: Content is protected !!