ಗಾಳಿ‌ ಮಳೆಗೆ ಮುರಿದು ಬಿದ್ದ ಮನೆಯ ಮೇಲ್ಚಾವಣಿಗಳು: ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ, ಪರಿಶೀಲನೆ

ಗಾಳಿ‌ ಮಳೆಯ ರಭಸಕ್ಕೆ ಮನೆಯ ಮೇಲ್ಚಾವಣಿಗಳು ಮುರಿದು ಬಿದ್ದ ಘಟನೆ ಕೂಡುಮಂಗಳೂರು ಗ್ರಾ.ಪಂ‌ ನ ಕೂಡೂರು ಬಸವೇಶ್ವರ ಬಡಾವಣೆಯಲ್ಲಿ ‌ನಡೆದಿದೆ.
ಬಸವೇಶ್ವರ ಬಡಾವಣೆಯ ಪ್ರಕಾಶ್ ಎಂಬುವವರ ಮನೆಯ ಸುಮಾರು ೧೫ ಕ್ಕೂ ಹೆಚ್ಚು ಮೇಲ್ಚಾವಣೆಗಳು ಮುರಿದು‌ ಬಿದ್ದಿವೆ.‌ ಮನೆಯಲ್ಲಿ ಯಾರೂ ಇಲ್ಲದ ಸಮಯ ಘಟನೆ ನಡೆದಿದ್ದು, ಮನೆಮಂದಿ‌ ಅನಾಹುತದಿಂದ ಪಾರಾಗಿದ್ದಾರೆ.‌

ಘಟನೆ ತಿಳಿದು ಸ್ಥಳಕ್ಕಾಗಮಿಸಿ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನಂತರ ಸಂಬಂಧಪಟ್ಟ ಕಂದಾಯ ಅಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಗ್ರಾಮ ಲೆಕ್ಕಿಗ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂದಾಜು‌ ನಷ್ಟವನ್ನು ಹಾಗೂ ಮನೆಯ ಮಾಲೀಕರ ಮಾಹಿತಿಯನ್ನು ಕಲೆ ಹಾಕಿದ ಅವರು, ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ಮಳೆಗಾಲದಲ್ಲಿ ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿ ವಾಸವಿರದೇ ಸುರಕ್ಷಿತ‌ ಸ್ಥಳಕ್ಕೆ‌ ತೆರಳುವಂತೆ ಮನವಿ ಮಾಡಿದರು. ಏನೇ ಸಮಸ್ಯೆಯಿದ್ದರೂ ಪಂಚಾಯಿತಿ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.‌
ಈ ಸಂದರ್ಭ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

error: Content is protected !!