ಗಾಂಜಾ ವಶ

ಕೊಡಗು(ವಿರಾಜಪೇಟೆ): ಗೋಣಿಕೊಪ್ಪ ಕಡೆಯಿಂದ ಬಿಟ್ಟಂಗಾಲ ಮಾರ್ಗವಾಗಿ ವಿರಾಜಪೇಟೆ ಕಡೆಗೆ ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದವರ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ವಿರಾಜಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ನೇತೃತ್ವದ ತಂಡ ಆರೋಪಿ ಕಿರಗೂರು ಗ್ರಾಮದ ಯು. ಸೋಮಣ್ಣ ಎಂಬವರನ್ನು ವಶಕ್ಕೆ ಪಡೆದು ಆತನಿಂದ 45 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಹಾಗು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿ ಸಂದರ್ಭದಲ್ಲಿ ಮತ್ತೊಬ್ಬ ಆರೋಪಿ ಬಾಳುಗೋಡು ಗ್ರಾಮದ ಬೋಪಣ್ಣ ಪರಾರಿಯಾಗಿದ್ದಾನೆ.