ಗರ್ಕಿನ್ಸ್ ಬೆಳೆದು ಆರ್ಥಿಕವಾಗಿ ಸದೃಢರಾಗಿ


ವರದಿ:ಕೊಃಪುಳೀರ ಗಿರಿಧರ್

ಕೊಡಗು:ಗರ್ಕಿನ್ಸ್ ಇದೇನಿದು ಹೊಸ ತರಕಾರಿ? ಅಂದುಕೊಳ್ಳಬೇಡಿ ಇದು ಮಿಡಿಸೌತೆ.ಬೇಸಿಗೆ ಸಂದರ್ಭದಲ್ಲಿ ಭತ್ತದ ಗದ್ದೆಯಲ್ಲಿ ಬೆಳೆಸುವ ನಾಡು ಸೌತೆಗಿಂತ ಚಿಕ್ಕದು ತೊಂಡೆಕಾಯಿಗಿಂತ ದೊಡ್ಡದಾದ ಈ ಮಿಡಿ ಸೌತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರೀ ಬೇಡಿಕೆ ಇದೆ.ಇದೀಗ ಕೊಡಗಿನಲ್ಲಿ ಬೆಳೆಸಿ ಪ್ರೋತ್ಸಾಹ ನೀಡಲು ಗೊಣಿಕೊಪ್ಪದಲ್ಲಿರುವ ಕಿತ್ತಳೆ ಬೆಳೆಗಾರರ ಸಹಕಾರ ಸಂಘ ಮುಂದೆ ಬಂದಿದೆ.ಇದಕ್ಕೆ ಕಾರಣವಾಗಿದ್ದು ಕಿತ್ತಳೆಯನ್ನೇ ಬೆಳೆದು ಆರ್ಥಿಕವಾಗಿ ಸದೃಢರಾಗಿದ್ದ ಬೆಳೆಗಾರರಿಗೆ ಇದೀಗ ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಿನ್ನುವುದಕ್ಕೂ ಸಿಗದಂತಹಾ ಪರಿಸ್ತಿತಿಯನ್ನು ಅರಿತ ಸಂಘದ ಅಧ್ಯಕ್ಷ ಅರುಣ್ ಮಾಚಯ್ಯ ಕಿತ್ತಳೆ ಬೆಳೆಗಾರರ ಬೆಂಬಲಕ್ಕೆ ನಿಂತಿದ್ದಾರೆ.

ವಿದೇಶದಲ್ಲಿ ಹೆಚ್ಚಾಗಿ ಅಡುಗೆ ಬದಲು,ಬರ್ಗರ್,ಸ್ಯಾಂಡ್ವಿಚ್ ನಂತ ಖಾದ್ಯಗಳ ತಯಾರಿಕೆ ಬಳಸುವ ಈ ಗರ್ಕಿನ್ ಕಡಿಮೆ ಅವಧಿಯಲ್ಲಿ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದೆಂದು ಸಂಘದ ಉದ್ದೇಶ.ಈಗಾಗಲೇ ಸಂಘ ಬೆಂಗಳೂರು ಮೂಲದ ಎ.ಆರ್.ಟಿ.ಎಂ ಸಂಸ್ಥೆ ಜೊತೆ ವಾರ್ಷಿಕ 560 ಟನ್ ನಷ್ಟು ಉತ್ಪಾಧಿಸಿ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿದೆ. ವಾರ್ಷಿಕವಾಗಿ 2.50 ವಹಿವಾಟು ನಡೆಸಲಿದ್ದು ಸಂಘಕ್ಕೆ 12 ಲಕ್ಷದಷ್ಟು ಆದಾಯ ಸಹಾ ಸಿಗಲಿದೆ.ಇದೇ ಉದ್ದೇಶದಿಂದ ಸಂಘ ಬೆಳೆಗಾರರಿಂದ ನೇರವಾಗಿ ಖರೀದಿಸಲು ನಿರ್ಧರಿಸಿದೆ.

ಲಾಭ, ನಷ್ಟ,ಉತ್ಪಾದನೆ:
ಪಾಳು ಬಿದ್ದ ಜಾಗವೊಂದಿದ್ದರೆ ಸಾಕು ಗರ್ಕಿನ್ಸ್ ಸುಲಭವಾಗಿ ಬೆಳೆಯಬಹುದಾಗಿದೆ. ಇದು ಎರಡು ತಿಂಗಳ ಬೆಳೆಯಾಗಿದ್ದು ಬಿತ್ತನೆ ಮಾಡಿ 25 ದಿನಕ್ಕೆ ಹೂ ಬಿಟ್ಟು 35ನೇ ದಿನಕ್ಕೆ ಕಾಯಿ ಬಿಡಲು ಶುರುವಾಗುತ್ತದೆ.40 ದಿನಕ್ಕೆ ಇಳುವರಿ ನೀಡಲಿದೆ ಪ್ರತಿ ದಿನಕ್ಕೆ ಒಂದು ಕ್ವಿಂಟಾಲ್ ನಂತೆ 60 ದಿನಗಳವರೆಗೆ ತಲಾ 2 ಕ್ವಿಂಟಾಲ್ ನಂತೆ ಉತ್ಪಾಧನೆ ಮಾಡಬಹುದಾಗಿದೆ. ನಾಲ್ಕು ವಿಭಾಗದಲ್ಲಿ ಇವುಗಳನ್ನು ವಿಂಗಡಿಸಿ ಖರೀದಿಸಲಾಗುವುದು. ಒಂದು ಏಕರೆಗೆ 70 ಸಾವಿರ ಬಂಡವಾಳ ಹೂಡಿದರೆ 3 ಲಕ್ಷದವರೆಗೂ ಆದಾಯ ಪಡೆಯಬಹುದಾಗಿದೆ.”ಕಿತ್ತಳೆ ಬೆಳೆಗಾರರು ಫಸಲು ಇಲ್ಲದೆ ಸಂಕಷ್ಟದಲ್ಲಿ ಇರುವಾಗ ಆರ್ಥಿಕವಾಗಿ ಸದೃಡಗೊಳಿಸಲು ಗರ್ಕಿನ್ ಉಪಯುಕ್ತವಾಗಲಿದ್ದು ,ರೈತರಿಗೆ ಮಾಹಿತಿ ಒದಗಿಸುವ ಕಾರ್ಯಗಾರ ಮತ್ತು ಬೀಜಗಳ ವಿತರಣೆ ಸದ್ಯದಲ್ಲೇ ಮಾಡುವುದಾಗಿ ,ಸಂಘದ ಅಧ್ಯಕ್ಷ ಅರುಣ್ ಮಾಚಯ್ಯ ತಿಳಿಸಿದ್ದಾರೆ.

ಜಿಲ್ಲಿಯಲ್ಲಿರುವ ಏಕೈಕ ಹಣ್ಣಿನ ಉತ್ಪಾದನಾ ಕೈಗಾರಿಕೆ ಇದಾಗಿದ್ದು, ಈಗಾಗಲೇ ಕಿತ್ತಳೆ,ಅನಾನಸ್, ದ್ರಾಕ್ಷಿ, ಫೇಷನ್ ಫ್ರುಟ್ ಪೇಯಗಳು, ಸೋಡಾ , ಜಾಮ್, ಟೊಮೇಟೋ ಸಾಸ್,ಸ್ಕ್ವಾಷ್ ಸೇರಿದಂತೆ ಅಮೇರಿಕಾದಂತಹಾ ದೇಶಗಳಲ್ಲಿ ಹೆಚ್ಚಾಗಿ ಬಳಸುವ ಪಿಜ್ಜಾಗಳ ಟಾಪಿಂಗ್ಸ್ ಸಹ ಈ ಸಂಘ ಉತ್ಪಾಧಿಸುತ್ತದೆ.1942ರಲ್ಲಿ ಬ್ರಿಟೀಶ್ ಅಧಿಕಾರಿ
ಐವರ್ ಬುಷ್ ಎಂಬುವವರು ಕಿತ್ತಳೆಯ ಸಂರಕ್ಷಣೆಗೆ ಆರಂಭಗೊಂಡ ಈ ಘಟಕ್ಕ ಒಂದಲ್ಲಾ ಒಂದು ರೀತಿಯ ಉತ್ಪಾಧನೆಗಳೂಂದಿಗೆ ಮುನ್ನಡೆಯುತ್ತಿದೆ.

error: Content is protected !!