ಗಡಿ ಜಿಲ್ಲೆಯಲ್ಲಿ ನಾಡ ಬಂದೂಕು ತಯಾರಿಕೆ: ನಾಲ್ವರ ಬಂಧನ

ಕೊಡಗು: ಜಿಲ್ಲೆಯ ಗಡಿ ಹೊಂದಿಕೊಂಡಂತೆ ಇರುವ ದಕ್ಷಿಣಕನ್ನಡದ ಸುಳ್ಯದಲ್ಲಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ಸುಬ್ರಮಣ್ಯ ಪೋಲಿಸರು ದಾಳಿ ನಡೆಸಿ ಮಾಲು ಸಮೇತ ನಾಲ್ವರನ್ನು ಬಂಧಿಸಿದ್ದಾರೆ.ಇಲ್ಲಿನ ಛತ್ರಪಾಡಿ ಎಂಬಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡಿದ್ದ ದಿವಾಕರ ಆಚಾರಿ ಎಂಬುವವನ ಮನೆಯ ಸಮೀಪದಲ್ಲಿ ಬಂದೂಕುಗಳು ಪತ್ತೆಯಾಗಿದೆ.

ಬಂಧಿತರಿಂದ ನಾಡ ಪಿಸ್ತುಲ್,ಬ್ಯಾರಲ್ ಬಂದೂಕು ಪರಿಕರ,ನಕಲಿ ತೋಟ(ಕಾಟ್ರಿಡ್ಜ್) ವಶಕ್ಕೆ ಪಡೆಯಲಾಗಿದೆ.ಸುಳ್ಯ ಪೋಲಿಸ್ ಸರ್ಕಲ್ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಛತ್ರಪಾಡಿ ದಿವಾಕರ್ ಆಚಾರಿ,ಕಡಬ ತಾಲ್ಲೂಕಿನ ತ್ತನೋಚಿಲದ ಕಾರ್ತಿಕ್,ಚಿದ್ಗಲ್ ನ ಅಶೋಕ್ ಮತ್ತು ಹಾಸನದ ಹನುಮಂತಪುರದ ಚಂದನ್ ರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.