fbpx

ಗಡಿಯಲ್ಲಿ ವನ್ಯಜೀವಿ ಸಾಗಾಟ: ಬಂಧನ

ಜಿಲ್ಲೆಯಲ್ಲಿ ಲಾಕ್ಡೌನ್ ಇದ್ದರೂ ಕಣ್ಣುತಪ್ಪಿಸಿ ಕೊಡಗಿನ ಆನೆಚೌಕುರು ಮೂಲಕ ಮೈಸೂರಿನಿಂದ,ಅಳಿವಿನಂಚಿನಲ್ಲಿರುವ ಎರಡು ತಲೆ ಹಾವು,ಮಣ್ಣಾವು ಎಂದಃ ಕರೆಸಿಕೊಳ್ಳುವ ಸ್ಯಾಂಡ್ ಬೋವಾ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದೊದ ನಾಲ್ವರನ್ನು ದೇವರಪುರದಲ್ಲಿ ಬಂಧಿಸಲಾಗಿದ್ದು,ಹಾವನ್ನು ವಶಕ್ಕೆ ಪಡೆ‌ಯಲಾಗಿದೆ.

ಆರೋಪಿಗಳು ದಾವಣಗೆರೆ ಮೂವ‌ಲದವರಾಗಿದ್ದು,ಸ್ಥಳೀರೊಬ್ಬರಿಗೆ ಮಾರಾಟ ಮಾಡಲು ಬರುತ್ತಿದ್ದರು ಎನ್ನುವ ಮಾಹಿತಿ ಮೇರೆಗೆ ಅರಣ್ಯ,ಸಂಚಾರಿ,ದಳ ಕಾರ್ಯಾಚರಣೆ ನಡೆಸಿ ಹಾವು ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ವಿವರ ಇಂತಿದೆ ಮಹರ್ ಸತರ್ ಶೇಖ್,ಮಲ್ಲಕ್ ಸಾಬ್ ಹೋಂಟಿ,ಶಿವಕುಮಾರ್,ಮಹಮದ್ ಖಾಸಿಂ ಮಕಂದರ್ ರನ್ನು ಬಂಧಿಸಲಾಗಿದೆ.

error: Content is protected !!