ಗಂಧದ ಮರ ಕಡಿಯುತ್ತಿದ್ದ ಆರೋಪಿ ಬಂಧನ

ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ವ್ಯಾಪ್ತಿಯಲ್ಲಿನ ಐಗೂರಿನಲ್ಲಿ ಬಡದಿಂದಲೇ ಗಂಧದ ಮರ ಕಡಿಯುತ್ತಿದ್ದ ವೇಳೆ ಮಾಲು ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು,ಮರವನ್ನು ಕತ್ತರಿಸುತ್ತಿದ್ದ ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾನೆ.

ಇಲ್ಲಿನ ಐಗೂರು ಎಡವಾರೆ ಗ್ರಾಮದ ಗೋಟವಾಳ ಮಂಟಿಯಲ್ಲಿ ಸಜ್ಜಳ್ಳಿ ಗ್ರಾಮದ ಜೆ.ಕೆ ರವಿಯನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಮದನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

error: Content is protected !!