ಖೇಲೋ ಇಂಡಿಯಾ ಯೋಜನೆಗೆ ಪೊನ್ನಂಪೇಟೆ ಹಾಕಿ ಕ್ರೀಡಾಂಗಣ ಆಯ್ಕೆ

ಕೇಂದ್ರ ಕ್ರೀಡಾ ಇಲಾಖೆಯ ಪ್ರತಿಷ್ಟಿತ ಯೋಜನೆಯಾದ ಖೇಲೋ ಇಂಡಿಯಾಕ್ಕೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಕಿ ಕ್ರೀಡಾಂಗಣ ಆಯ್ಕೆಯಾಗಿದೆ.

ಖೇಲೋ ಇಂಡಿಯಾಕ್ಕೆ ಆಯ್ಕೆಯಾದ 31 ಜಿಲ್ಲೆಗಳಲ್ಲಿ ಕೊಡಗು ಮತ್ತು ಮೈಸೂರು ಹಾಕಿ ಕ್ರೀಡೆಗೆ ಮೀಸಲಿಡಲಾಗಿದ್ದು, ಖ್ಯಾತ ಹಾಕಿ ಪಟು ಡಾ.ಎ.ಬಿ.ಸುಬ್ಬಯ್ಯ ಪ್ರಯತ್ನದಿಂದಾಗಿ ಪೊನ್ನಂಪೇಟೆ ಹಾಕಿ ಕ್ರೀಡಾಂಗಣ ಖೇಲೋ ಇಂಡಿಯಾ ಯೋಜನೆಯಲ್ಲಿ ಸ್ಥಾನ ಪಡೆದಿದೆ.ಹಾಕಿಯ ತವರೂರಾಗಿರು ಕೊಡಗಿನಿಂದ ಈಗಾಗಲೇ ರಾಷ್ಟ್ರೀ,ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಸಾಕಷ್ಟು ಆಟಗಾರರಿದ್ದು,ಖೇಲೋ ಇಂಡಿಯಾದ ಮೂಲಕ ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ತೆರೆಲ್ಪಟ್ಟಿದೆ.

error: Content is protected !!