fbpx

ಖಾಸಗಿ ಮೈಕ್ರೋ ಫೈನಾನ್ಸ್ ಗಳ ಹಾವಳಿ: ಗೂಂಡಾ ವರ್ತನೆ ನಿಲ್ಲಿಸಲು ಪೊಲೀಸ್ ಅಧಿಕಾರಿಗಳ ವಾರ್ನಿಂಗ್!

ಕುಶಾಲನಗರ ವ್ಯಾಪ್ತಿಯ ಖಾಸಗಿಮೈಕ್ರೋಫೈನಾನ್ಸ್ ಗಳ ವ್ಯವಸ್ಥಾಪಕರು, ಪ್ರತಿನಿಧಿಗಳೊಂದಿಗೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದರು.
ಖಾಸಗಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚುತ್ತಿದ್ದು ಸಾಲ ವಸೂಲಾತಿ ಸಂದರ್ಭ ಗೂಂಡಾಗಿರಿ ನಡೆಸಲಾಗುತ್ತಿದೆ ಎಂಬಿತ್ಯಾದಿ ಆರೋಪಗಳ ಹಿನ್ನಲೆಯಲ್ಲಿ ಸಭೆ ನಡೆಯಿತು.
ನಗರ ಪೊಲೀಸ್ ಠಾಣಾ ಆವರಣದಲ್ಲಿನ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಗ್ರಾಮಾಂತರ ಠಾಣಾ ವ್ಯಾಪ್ತಿಯ ೧೦ ಕ್ಕೂ ಅಧಿಕ ಮೈಕ್ರೋಫೈನಾನ್ಸ್ ಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಶೈಲೇಂದ್ರ, ಆರ್‌ಬಿ ಐ ನಿಯಮದನ್ವಯ ಖಾಸಗಿ ಫೈನಾನ್ಸ್ ಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು. ಹೆಚ್ಚಿನ ಬಡ್ಡಿ ವಿಧಿಸಿ ಸಾಲ ನೀಡುವುದಲ್ಲದೆ ಮರುಪಾವತಿಗಾಗಿ ಮನೆಮನೆಗೆ ತೆರಳಿ ಗೂಂಡಾ ವರ್ತನೆ ತೋರುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ನಿಯಮ ಮೀರಿ ದಬ್ಬಾಳಿಕೆ ನಡೆಸಿದಲ್ಲಿ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು.
ಗೂಂಡಾ ಪ್ರವೃತ್ತಿ ಬಿಟ್ಟು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಿದೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿಗಳಾದ ಶಿವಶಂಕರ್, ಚಂದ್ರಶೇಖರ್, ಮಾದೇಶ್ ಇದ್ದರು.

error: Content is protected !!