ಖಾಸಗಿ ಕ್ಲಿನಿಕ್ ನಡೆಸೋ ಸರಕಾರಿ ವೈದ್ಯರ ಮೇಲೆ ಕೇಸ್ ದಾಖಲಿಸಬೇಕು: ಡಿಸಿಎಂ ಸವದಿ

ರಾಯಚೂರು: ಖಾಸಗಿ ಕ್ಲಿನಿಕ್ ಹೊಂದಿರುವ ಸರ್ಕಾರಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ರಾಯಚೂರಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸವದಿ.. ಖಾಸಗಿ ಕ್ಲಿನಿಕ್ ನಡೆಸುವವರನ್ನು ಬಂಧಿಸಬೇಕು. ರಾಯಚೂರು ಸಹಾಯಕ ಆಯುಕ್ತರು ಹಾಗೂ ರಿಮ್ಸ್ ಶಸ್ತ್ರಚಿಕಿತ್ಸಕರು. ವೈದ್ಯರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ರಿಮ್ಸ್ ನ ಕೋವಿಡ್ ಆಸ್ಪತ್ರೆಗೆ ಪಿಪಿ ಕಿಟ್ ಹಾಕಿಕೊಂಡು ಹೋಗಿ ಅಲ್ಲಿನ ವಾರ್ಡ್ಗಳ ತಪಾಸಣೆ ನಡೆಸಬೇಕು.
ಅಲ್ಲಿನ ರೋಗಿಗಳೊಂದಿಗೆ ಚರ್ಚಿಸಿ, ಅವರಿಗೆ ನೀಡಲಾಗುತ್ತಿರುವ ಔಷಧೋಪಚಾರಗಳು, ಊಟ, ಉಪಹಾರ ಅವರ ತಪಾಸಣೆಯ ವಿವರಗಳನ್ನು ಪರಿಶೀಲಿಸಿ ವರದಿ ನೀಡಬೇಕು. ಈ ರೀತಿಯಾದಲ್ಲಿ ಯಾವ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯಲಿದೆ ಎಂದಿದ್ದಾರೆ. ಸರಿಯಾಗಿ ಕರ್ತವ್ಯ ನಿರ್ವಹಿಸದವರ ಮೇಲೆ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದ್ದಾರೆ.