fbpx

ಖಾಯಿಲೆ ವಾಸಿ ಮಾಡುವುದಾಗಿ ನಂಬಿಸಿ ಮೋಸ:ವಾಮಾಚಾರ ಮಾಡುವವನ ಬಂಧನ


ಕೊಡಗು: ಅಮಾಯಕರೊಬ್ಬರಿಗೆ ಹಲವು ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯ ಮತ್ತು ಮನೆಯಲ್ಲಿನ ಸಮಸ್ಯೆಗೆ ಪರಿಹಾರ ಮಾಡಿಕೊಡುವುದಾಗಿ ತನ್ನ ಮೈಮೇಲೆ ದೇವರು ಬರುತ್ತದೆ,ಅದರಿಂದ ಪರಿಹಾರ ಒದಗಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ವಿರಾಜಪೇಟೆ ತಾಲ್ಲೂಕಿನ ಬಲ್ಯಮಂಡೂರಿನಲ್ಲಿ ನಡೆದಿದೆ.ಇಲ್ಲಿ ಮಡಿವಾಳರ ರವಿ ಎಂಬಾತ ಇಲ್ಲಿಗೆ ಸಮೀಪದ ಬೆಳ್ಳೂರು ಗ್ರಾಮದ ವ್ಯಕ್ತಿಯ ಸಮಸ್ಯೆ ಬಗೆ ಹರಿಸಿಕೊಡುವುದಾಗಿ ನಂಬಿಸಿ ಅವರಿಂದ ಈ ಪೂಜೆ ಕಾರ್ಯಕ್ಕೆ 30 ಸಾವಿರ ದಷ್ಟು ಹಣ ಖರ್ಚಾಗಲಿದೆ ಎಂದು ತಿಳಿಸಿದ್ದು,ಅಪರಿಚಿತರು ಮನೆಯ ಸಮೀಪದಲ್ಲಿ ಮಾಟ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದಾರೆ ಅದನ್ನು ತೆಗೆದುಕೊಟ್ಟು ಪರಿಹಾರ ಒದಗಿಸುವುದಾಗಿ ನಂಬಿಸುತ್ತಾನೆ.

ಈ ವಿಚಾರ ಅಮಾಯಕ ವ್ಯಕ್ತಿಯ ಸಂಬಂಧಿಕೊಬ್ಬರಿಗೆ ತಿಳಿದು ಮಾಟ ತೆಗೆಯುವ ದಿನದಂದು ಮನೆಯ ಆವರಣದಲ್ಲೇ ಹಳ್ಳ ತೋಡಿ,ಮೈ ಮೇಲೆ ದೇವರು ಬರುವ ನಾಟಕವಾಡಿ ಕೆಲವು ಸಮಯ ಕತ್ತಲಿನಲ್ಲಿ ದೇವರನ್ನು ಆಹ್ವಾನೆ ಮಾಡಿದಂತೆ ಮಾಡಿ ಇದ್ದಕ್ಕಿಂತೆ ಹಳಕ್ಕೆ ಬೀಳುತ್ತಾನೆ.ಈ ಸಂದರ್ಭ ತನ್ನ ಪಂಚೆಯಲ್ಲಿ ಮೊದಲೇ ಇರಿಸಿಕೊಂಡಿದ್ದ ತಾಯಿತವನ್ನು ಮಣ್ಣಿನ ಗಡಿಯೊಳಗೆ ಸಿಲುಕಿ ಮಾಟ ತೆಗೆದಂತೆ ಸನ್ನಿವೇಷ ಸೃಷ್ಟಿ ಮಾಡುತ್ತಾನೆ.ಆದರೆ ಈ ಸಂಪೂರ್ಣ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ದೇವರು ಬರುವ ವ್ಯಕ್ತಿ ರವಿಯನ್ನು ವಶಕ್ಕೆ ಪಡೆದು ವಿಚಾರಿಸಿದ ಸಂದರ್ಭ ತಪ್ಪು ಒಪ್ಪುಕೊಂಡಿದ್ದು ಬುದ್ದಿವಾದ ಹೇಳಿ ಬಿಟ್ಟು ಕಳಿಸಿದ್ದಾರೆ.

error: Content is protected !!